ADVERTISEMENT

ಕನಕಗಿರಿ| ಬಣಜಿಗ ಸಮುದಾಯ ಸಂಘಟನೆಗೆ‌ ಒತ್ತು‌ ನೀಡಿ: ಶರಣಬಸಪ್ಪ ಭತ್ತದ

​ಪ್ರಜಾವಾಣಿ ವಾರ್ತೆ
Published 25 ಜನವರಿ 2026, 7:00 IST
Last Updated 25 ಜನವರಿ 2026, 7:00 IST
ಕನಕಗಿರಿಯ ಎಪಿಎಂಸಿ‌ ಮಳಿಗೆಯಲ್ಲಿ ಬಣಜಿಗ ಸಮಾಜದ ತಾಲ್ಲೂಕು ಹಾಗೂ ನಗರ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು
ಕನಕಗಿರಿಯ ಎಪಿಎಂಸಿ‌ ಮಳಿಗೆಯಲ್ಲಿ ಬಣಜಿಗ ಸಮಾಜದ ತಾಲ್ಲೂಕು ಹಾಗೂ ನಗರ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು   

ಕನಕಗಿರಿ: ‘ಬಣಜಿಗ ಸಮಾಜದ ಏಳಿಗೆಗೆ ತಾಲ್ಲೂಕು ಹಾಗೂ ಯುವ ಘಟಕ ಶ್ರಮಿಸಬೇಕು’ ಎಂದು ಬಣಜಿಗ ಸಮಾಜದ ನಿಕಟಪೂರ್ವ ಅಧ್ಯಕ್ಷ ಶರಣಬಸಪ್ಪ ಭತ್ತದ ಹೇಳಿದರು.

ಪಟ್ಟಣದ ಎಪಿಎಂಸಿ ಮಳಿಗೆಯಲ್ಲಿ ನಡೆದ ಬಣಜಿಗ ಸಮಾಜದ ತಾಲ್ಲೂಕು ಹಾಗೂ ಯುವ ಘಟಕದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿದರು.

‘ಸಮುದಾಯದವರ ಕಷ್ಟ, ಸುಖಗಳಿಗೆ ಸಂಘಟನೆ ಹಾಗೂ ಪ್ರಮುಖರು ಸ್ಪಂದಿಸುವ ಕೆಲಸ ಮಾಡಬೇಕು. ಜಿಲ್ಲೆ,‌ ರಾಜ್ಯಮಟ್ಟದಲ್ಲಿ‌ ನಡೆಯುವ ಸಮಾಜದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು’ ಎಂದು ತಿಳಿಸಿದರು.

ADVERTISEMENT

ಸಮಾಜದ ರಾಜ್ಯ ಕಾರ್ಯಕಾರಣಿ ಸದಸ್ಯ ವಿಶ್ವನಾಥ ಮಳಗಿ, ಮುಖಂಡ ಬಸವರಾಜ‌ ಪಗಡದಿನ್ನಿ ಮಾತನಾಡಿ,‘ಬಣಜಿಗ ಸಮಾಜದ‌ ಮದುವೆ ಹಾಗೂ ಇತರೆ ಕಾರ್ಯಕ್ರಮಗಳನ್ನು ನಡೆಸಲು ಸಮುದಾಯ ಭವನ ನಿರ್ಮಿಸುವ ಅಗತ್ಯ ಇದೆ. ಈ ನಿಟ್ಟಿನಲ್ಲಿ ಶ್ರಮವಹಿಸಬೇಕು’ ಎಂದರು.

ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ವೀರೇಶ ಶೆಟ್ಟರ್, ಪಟ್ಟಣ ಪಂಚಾಯಿತಿ ಸದಸ್ಯ ಸುರೇಶ‌ ಗುಗ್ಗಳಶೆಟ್ರ, ಗ್ರಾಮ ಪಂಚಾಯತಿ ಉಪಾಧ್ಯಕ್ಷ ಪ್ರಕಾಶ ಹಾದಿಮನಿ,‌ ಪ್ರಮುಖರಾದ ಶರಣಪ್ಪ ಬಳಗಾನೂರು, ವಿರೂಪಾಕ್ಷಪ್ಪ ಭತ್ತದ, ದೊಡ್ಡಬಸಪ್ಪ ಚಿತ್ರಿಕಿ, ಅಂದಾನಪ್ಪ ಉಡಮಕಲ್, ಶರಣಪ್ಪ ಮೆರನಾಳ, ಸಿದ್ಧಪ್ಪ ಕಪಲಿ, ವೀರೇಶ ಅಂಗಡಿ ಕರಡೋಣಿ, ವೀರೇಶ ಕೋರಿ, ಶರಣಪ್ಪ ಎಂ.ಭತ್ತದ, ವೀರೇಶೆಟ್ಟಪ್ಪ ಹಾಜರಿದ್ದರು.

ಪದಾಧಿಕಾರಿಗಳ ಆಯ್ಕೆ

ಸಮಾಜದ ತಾಲ್ಲೂಕು ಹಾಗೂ ನಗರ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಂಗಪ್ಪ ಗುಗ್ಗಳಶೆಟ್ರು (ಗೌರವಾಧ್ಯಕ್ಷ) ಪ್ರಶಾಂತ ಪ್ರಭುಶೆಟ್ಟರ್ (ಅಧ್ಯಕ್ಷ) ಸುರೇಶ ಗುಗ್ಗಳಶೆಟ್ರು ಶರಣಪ್ಪ ಯತ್ನಟ್ಟಿ (ಉಪಾಧ್ಯಕ್ಷರು) ಸಂತೋಷ ಹಾದಿಮನಿ (ಪ್ರಧಾನ ಕಾರ್ಯದರ್ಶಿ) ಶಿವಕುಮಾರ ಕೋರಿಶೆಟ್ರು (ಕೋಶಾಧಿಕಾರಿ) ಪ್ರಶಾಂತ ಭತ್ತದ (ಕಾರ್ಯದರ್ಶಿ) ಸಣ್ಣ ಶರಣಪ್ಪ ಬಳಗಾನೂರು ನವಲಿ (ಸಹ ಕಾರ್ಯದರ್ಶಿ) ಜಗದೀಶ ಅಂಗಡಿ ಸುಳೇಕಲ್ (ಸಂಘಟನಾ ಕಾರ್ಯದರ್ಶಿ) ಶರಣಬಸಪ್ಪ ಎಸ್.ಭತ್ತದ (ನಿಕಟಪೂರ್ವ ಅಧ್ಯಕ್ಷ) ವೀರೇಶ ಬಳಿಗಾರ ಶರಣಪ್ಪ ಕಲಕೇರಿ ರುದ್ರಮುನಿ ದೋಟಿಹಾಳ ನಾಗರಾಜ ಮೇರನಾಳ ಕರಡೋಣಿ ಚನ್ನಬಸಪ್ಪ ಪಟ್ಟಣಶೆಟ್ಟಿ ವೀರಣ್ಣ ಅಂಗಡಿ ಚಿಕ್ಕಮಾದಿನಾಳ (ಸದಸ್ಯರು). ನಗರ ಘಟಕ: ರಾಚಪ್ಪ ಪ್ರಭುಶೆಟ್ಟರ್ (ಗೌರವಾಧ್ಯಕ್ಷ) ಚಂದ್ರಶೇಖರ ಚೋಳಿನ್ (ಅಧ್ಯಕ್ಷ) ಆನಂದ ಭತ್ತದ (ಉಪಾಧ್ಯಕ್ಷ) ಪೃಥ್ವಿ ಮ್ಯಾಗೇರಿ (ಪ್ರಧಾನ ಕಾರ್ಯದರ್ಶಿ) ಮಲ್ಲಿಕಾರ್ಜುನ ಹಾದಿಮನಿ (ಕೋಶಾಧಿಕಾರಿ) ಮಲ್ಲಿಕಾರ್ಜುನ ಮುಂಡರಗಿ (ಕಾರ್ಯದರ್ಶಿ) ಸೋಮಲಿಂಗಪ್ಪ ಕರಡೋಣಿ (ಸಂಘಟನಾ ಕಾರ್ಯದರ್ಶಿ) ವೀರೇಶ ಮಿಟ್ಲಕೋಡ ಬಸವರಾಜ ಲಿಂಗಪ್ಪ ಹಾದಿಮನಿ ಮಂಜುನಾಥ ಬೊಳ್ಳೊಳ್ಳಿ ವೀರಭದ್ರಪ್ಪ ಬುಡಕುಂಟಿ ಕರಡೋಣಿ (ಸದಸ್ಯರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.