
ಗಂಗಾವತಿ: ಇಲ್ಲಿನ ಶ್ರೀಕೊಲ್ಲಿನಾಗೇಶ್ವರರಾವ್ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಂಬೇಡ್ಕರ್ ಸಭಾಂಗಣದಲ್ಲಿ ಶನಿವಾರ ಬರಗೂರು ರಾಮಚಂದ್ರಪ್ಪ ಅವರ ‘ಸೌಹಾರ್ದ ಭಾರತದ ಸಮಾನತೆಯ ಸ್ನೇಹಿತ’ ಕೃತಿ ಲೋಕಾರ್ಪಣೆ ಮಾಡಲಾಯಿತು.
ಕೊಪ್ಪಳ ವಿಶ್ವವಿದ್ಯಾಲಯದ ನೂತನ ಕುಲಪತಿ ಎಸ್.ವಿ.ಡಾಣಿ ಮಾತನಾಡಿ, ‘ಬರಗೂರು ರಾಮಚಂದ್ರಪ್ಪ ಸೂಕ್ಷ್ಮ ಸಂವೇದನೆ, ಮಾನವೀಯ ಮೌಲ್ಯದ ಬರಹಗಾರ. ದುಷ್ಟಶಕ್ತಿಯಿಂದ ಸದ್ಯ ಭಾರತದ ಸೌಹಾರ್ದ ಉಳಿಸುವ ಅಗತ್ಯವಿದೆ’ ಎಂದರು.
ಶರಣೇಗೌಡ ಪೋಲೀಸ್‌ಪಾಟೀಲ ಮಾತನಾಡಿ, ‘ಬರಗೂರ ಅವರದ್ದು ಪ್ರಭಾವಿಸುವಂತ ವ್ಯಕ್ತಿತ್ವ. ಅವರ ಚಿಂತನೆಗಳು ಸಮಕಾಲೀನ ಸಂದರ್ಭಕ್ಕೆ ಸೂಕ್ತವಾದವು’ ಎಂದರು.
ಬಹುಮುಖಿ ಸಾಂಸ್ಕೃತಿಕ ವೇದಿಕೆ ಸಂಚಾಲಕಿ ಮುಮ್ತಾಜ್ ಬೇಗಂ ಮಾತನಾಡಿ, ‘ಮನುಷ್ಯ ಬದುಕಿನಲ್ಲಿ ಎಲ್ಲಕ್ಕಿಂತ ಮಿಗಿಲಾದದ್ದು ಮನುಷ್ಯತ್ವ ಎಂದು ಬರಗೂರು ಸಾರಿದ್ದಾರೆ’ ಎಂದರು.
ಬಸವರಾಜ ಗೌಡನಬಾವಿ ಮಾತನಾಡಿ, ‘ಬರಗೂರು ರಾಮಚಂದ್ರಪ್ಪ ಅವರ ಸೌಹಾರ್ದ ಭಾರತ ಸಮಾನತೆಯ ಸ್ನೇಹಿತ ಕೃತಿ ಮನುಷ್ಯ ಸಂಬಂಧಗಳನ್ನು ಬೆಸೆಯುವ ಕನಸು ಹೊತ್ತು ಬರುತ್ತಿದೆ’ ಎಂದರು.
ಶಿವರಾಜ ಗುರಿಕಾರ, ಸಿದ್ದಯ್ಯ ಪುರಾಣಿ ಪ್ರತಿಷ್ಠಾನದ ಅಧ್ಯಕ್ಷ ಅಜ್ಮೀರ ನಂದಾಪೂರ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರುದ್ರೇಶ ಮಡಿವಾಳ, ರವಿ ಹಾದಿಮನಿ, ಪದ್ಮಶ್ರೀ, ಲಕ್ಷ್ಮೀಬಾಯಿ, ಉಷಾರಾಣಿ, ಪಾಗುಂಡಪ್ಪ, ಪವನಕುಮಾರ ಗುಂಡೂರು, ಬಾಲಪ್ಪ ಬಡಿಗೇರ, ಹನುಮಂತಪ್ಪ, ಮಂಜುಳಾ, ಅಪೂರ್ವ, ಉಷಾರಾಣಿ, ಮಂಜುಳಾ ಪಾಟೀಲ, ಸುನಂದಾ, ಸಹಾಯಕ ಪ್ರಾಧ್ಯಾಪಕ ಫಣಿರಾಜ್ ಬಾರಕಾರ, ರವಿ ಹಾದಿಮನಿ, ಪವಿತ್ರಾ, ಭುವನೇಶ್ವರಿ ಸೇರಿದಂತೆ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.