ಕೊಪ್ಪಳ: ವಿಧಾನ ಪರಿಷತ್ ಸದಸ್ಯ ಹಾಗೂ ಹಿರಿಯರಾದ ಎಚ್.ವಿಶ್ವನಾಥ್ ಸಿಎಂ ಮೇಲೆ ಹತಾಶೆಯಿಂದ ಆರೋಪ ಮಾಡುವುದು ಸರಿ ಅಲ್ಲ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಶನಿವಾರ ಆಮ್ಲಜನಕ ಪ್ಲ್ಯಾಂಟ್ ಉದ್ಟಾಟಿಸಿ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಎಚ್.ವಿಶ್ವನಾಥ್ ಪಕ್ಷದ ಶಾಸಕರು, ಆಧಾರವಿಲ್ಲದೆ ಆರೋಪ ಮಾಡುವುದು ಸರಿಯಲ್ಲ. ಈ ಕುರಿತು ಸಿಎಂ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ ಎಂದರು.
ನಾಯಕತ್ವ ಬದಲಾವಣೆಯ ಬಗ್ಗೆ ಮಾತನಾಡದಂತೆ ಹೈಕಮಾಂಡ್ ಸೂಚನೆ ನೀಡಿದ್ದು, ಆ ಕುರಿತು ಯಾರೂ ಮಾತನಾಡಬಾರದು. ಹೈಕಮಾಂಡ್ ಆದೇಶ ಮೀರಿ ಮಾತನಾಡಿದವರೆ ಕೇಂದ್ರದ ವರಿಷ್ಠರೇ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು.
ಮೂಲ ಬಿಜೆಪಿ ಹಾಗೂ ವಲಸೆ ಬಿಜೆಪಿ ಅನ್ನೋದು ಇಲ್ಲ ಎಂದು ಸ್ವತಃ ಸಚಿವರಾದ ಕೆ.ಎಸ್ ಈಶ್ವರಪ್ಪನವರೇ ಹೇಳಿದ್ದಾರೆ. ಅವರ ಹೇಳಿಕೆ ಸ್ವಾಗತಾರ್ಹ. ನಾವು ಒಮ್ಮೆ ಪಕ್ಷಕ್ಕೆ ಬಂದು ಜನಾಭಿಪ್ರಾಯ ಪಡೆದು ಸಚಿವರಾಗಿದ್ದೇವೆ. ಬಿಜೆಪಿಯೆಂಬ ಮನೆಗೆ ನಾವು ಸೊಸೆಯಾಗಿ ಮೊಳೆ ಹೊಡೆದುಕೊಂಡು ಬಂದಿದ್ದೇವೆ. ಇದರಿಂದ ಬಿಜೆಪಿಯೇ ನಮ್ಮ ಪಕ್ಷ ಎಂದು ಮಾರ್ಮಿಕವಾಗಿ ಹೇಳಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ತಟ್ಟೆಯಲ್ಲಿ ಕತ್ತೆ ಬಿದ್ದಿದೆ. ಆದರೆ, ಬೇರೆಯವರ ತಟ್ಟೆಯಲ್ಲಿ ನೊಣದ ಬಗ್ಗೆ ಮಾತನಾಡುತ್ತಾರೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯನವರಿಗೆ ಟಾಂಗ್ ನೀಡಿದರು.
ಇದನ್ನೂ ಓದಿ... ನಾಯಕತ್ವ ಬದಲಾವಣೆ ವಿಚಾರ: ಬಿಜೆಪಿ ವರಿಷ್ಠರತ್ತ ಅತೃಪ್ತರ ಚಿತ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.