ADVERTISEMENT

‘ದೇಶಕ್ಕಾಗಿ ಪ್ರಾಣ ನೀಡಿದ ಸ್ಮರಣೀಯ’

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2020, 2:51 IST
Last Updated 30 ಸೆಪ್ಟೆಂಬರ್ 2020, 2:51 IST
ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ‘ಎ’ ಮತ್ತು ‘ಬಿ’ ಘಟಕಗಳು ಹಮ್ಮಿಕೊಂಡ ಕ್ರಾಂತಿಕಾರಿ ಭಗತ್‍ಸಿಂಗ್‌ರ 113ನೇ ಜನ್ಮ ದಿನೋತ್ಸವದ ನಿಮಿತ್ತ ಭಾವಚಿತ್ರಕ್ಕೆ ಉಪನ್ಯಾಸಕರು ಪೂಜೆ ಸಲ್ಲಿಸಿದರು
ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ‘ಎ’ ಮತ್ತು ‘ಬಿ’ ಘಟಕಗಳು ಹಮ್ಮಿಕೊಂಡ ಕ್ರಾಂತಿಕಾರಿ ಭಗತ್‍ಸಿಂಗ್‌ರ 113ನೇ ಜನ್ಮ ದಿನೋತ್ಸವದ ನಿಮಿತ್ತ ಭಾವಚಿತ್ರಕ್ಕೆ ಉಪನ್ಯಾಸಕರು ಪೂಜೆ ಸಲ್ಲಿಸಿದರು   

ಕೊಪ್ಪಳ: ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ದೇಶಕ್ಕಾಗಿ ಪ್ರಾಣ ನೀಡಿದ ಭಗತ್‍ಸಿಂಗ್ ಅವರ ತ್ಯಾಗ ಸದಾ ಸ್ಮರಣೀಯ ಎಂದು ಡಾ.ನಿಂಗಪ್ಪ ಕಂಬಳಿ ಹೇಳಿದರು.

ನಗರದ ಶ್ರೀ ಗವಿಸಿದ್ಧೇಶ್ವರ ಕಲಾ, ವಿಜ್ಞಾನ ಮತ್ತು ವಾಣಿಜ್ಯಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ‘ಎ’ ಮತ್ತು ‘ಬಿ’ ಘಟಕಗಳು ಹಮ್ಮಿಕೊಂಡ ಕ್ರಾಂತಿಕಾರಿ ಭಗತ್‍ಸಿಂಗ್‌ರ 113ನೇ ಜನ್ಮ ದಿನೋತ್ಸವದ ನಿಮಿತ್ತ ಹಮ್ಮಿಕೊಂಡ ‘ದೇಶಪ್ರೇಮ ಮತ್ತು ಭಗತ್ ಸಿಂಗ್’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಚಿಕ್ಕ ವಯಸ್ಸಿನಲ್ಲಿಯೇ ದೇಶ ಭಕ್ತಿ ಬೆಳೆಸಿಕೊಂಡು, ದೇಶಕ್ಕಾಗಿ ಬದುಕು ಅರ್ಪಿಸಿದ ಭಗತ್‍ಸಿಂಗ್ ಅವರ ಜೀವನ ಇಂದಿನ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ. ದೇಶಕ್ಕಿಂತ ದೊಡ್ಡ ಸಂಪತ್ತು ಯಾವುದು ಇಲ್ಲ. ದೇಶದ ಕಾರ್ಯಗಳಿಗಾಗಿ ನಾವು ಸದಾ ಸಿದ್ದರಿರಬೇಕು ಅಂದಾಗ ಮಾತ್ರ ಈ ನೆಲದ ಋಣ ತೀರಿಸಲು ಸಾಧ್ಯ ಎಂದರು.

ADVERTISEMENT

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಚಾರ್ಯ ಡಾ.ಜೆ.ಎಸ್.ಪಾಟೀಲಮಾತನಾಡಿದರು.

ಎನ್.ಎಸ್.ಎಸ್. ‘ಬಿ’ ಘಟಕದ ಅಧಿಕಾರಿಗಳಾದ ಡಾ. ನಾಗರಾಜ ದಂಡೋತಿ ಪ್ರಾಸ್ತಾವಿಕ ಮಾತನಾಡಿದರು. ಡಾ. ದಯಾನಂದ ಸಾಳುಂಕೆ, ಶರಣಬಸಪ್ಪ ಬಿಳಿಎಲಿ, ಡಾ.ಚನ್ನಬಸವ ಎ, ಮಹೇಶ ಬಿರಾದಾರ, ವಿನೋದ ಮುದಿಬಸನಗೌಡರ, ಡಾ.ಕರಿಬಸವೇಶ್ವರ, ಮಂಜುನಾಥ ಗಾಳಿ, ವೆಂಕಟೇಶ ನಾಯಕ ಇದ್ದರು. ರಾಜು ಹೊಸಮನಿ ವಂದಿಸಿದರು. ಭೂಮಿಕಾ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.