ADVERTISEMENT

ಭರತನಾಟ್ಯ ಮಾಡುತ್ತಾ 8.54 ನಿಮಿಷಗಳಲ್ಲಿ ಅಂಜನಾದ್ರಿ ಬೆಟ್ಟ ಏರಿದ ಕಲಾವಿದೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 11:09 IST
Last Updated 4 ಡಿಸೆಂಬರ್ 2025, 11:09 IST
<div class="paragraphs"><p>ಭರತನಾಟ್ಯ ಮಾಡುತ್ತಾ 8 ನಿಮಿಷದಲ್ಲಿ ಅಂಜನಾದ್ರಿ ಬೆಟ್ಟ ಏರಿದ ಕಲಾವಿದೆ</p></div>

ಭರತನಾಟ್ಯ ಮಾಡುತ್ತಾ 8 ನಿಮಿಷದಲ್ಲಿ ಅಂಜನಾದ್ರಿ ಬೆಟ್ಟ ಏರಿದ ಕಲಾವಿದೆ

   

ಕೊಪ್ಪಳ: ಹೊಸಪೇಟೆಯ ಹರ್ಷಿತಾ ಎನ್‌. ಎನ್ನುವವರು ಸೋಮವಾರ ಅಂಜನಾದ್ರಿ ಬೆಟ್ಟದ ಬುಡದಿಂದ ತುದಿಯವರೆಗೂ ಭರತನಾಟ್ಯ ಮಾಡುತ್ತಾ ಸಾಗಿ ದಾಖಲೆ ಬರೆದಿದ್ದಾರೆ. ಕೇವಲ 8 ನಿಮಿಷ 54 ಸೆಕೆಂಡ್‌ಗಳಲ್ಲಿ  ಬೆಟ್ಟದ ತುದಿಯನ್ನು ತಲುಪಿ ಆಂಜನೇಯನ ದರ್ಶನ ಪಡೆದು ಅಲ್ಲಿ ನೃತ್ಯ ಸೇವೆ ಸಲ್ಲಿಸಿದರು.

ಹರ್ಷಿತಾ ಅವರು ಹೊಸಪೇಟೆಯ ಎಂ.ಜೆ.ನಗರದಲ್ಲಿ ರುದ್ರತಾಂಡವ ನಾಟ್ಯ ಕಲಾ ಮಂದಿರವನ್ನು ನಡೆಸುತ್ತಿದ್ದಾರೆ

ADVERTISEMENT

ಬಳಿಕ, ಭರತನಾಟ್ಯ ಪ್ರದರ್ಶನದ ಮೂಲಕ ತಮ್ಮ ಗುರುವಿಗೆ ಹರ್ಷಿತಾ ಅವರ ವಿದ್ಯಾರ್ಥಿಗಳು ಕೃತಜ್ಞತೆ ಸಲ್ಲಿಸಿದರು.

ಹರ್ಷಿತಾ ಅವರು ಭರತನಾಟ್ಯದಲ್ಲಿ 10 ವಿಶ್ವದಾಖಲೆ ಮಾಡಿದ್ದಾರೆ. ಅಲ್ಲದೆ ಪಂಚಾಕ್ಷರಿ ಪ್ರಶಸ್ತಿ, ತಿರುಪತಿಯಲ್ಲಿ ಬಾಲಾಜಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.