ಕುಕನೂರು: ‘ತಳಕಲ್ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರ ಅನೂಕೂಲಕ್ಕೆ ಅನ್ನದಾನೀಶ್ವರ ಕಲ್ಯಾಣ ಮಂಟಪದ ಅವಶ್ಯಕತೆ ಇದೆ’ ಎಂದು ಮುಖಂಡ ಮುದಿಯಪ್ಪ ಯೋಗೆಮ್ಮನವರ ಹೇಳಿದರು.
ತಾಲ್ಲೂಕಿನ ತಳಕಲ್ ಗ್ರಾಮದ ಅನ್ನದಾನೀಶ್ವರ ಶಾಖಾಮಠಲ್ಲಿ ನೂತನ ಕಲ್ಯಾಣ ಮಂಟಪ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ಮಾಡಿ ಅವರು ಮಾತನಾಡಿದರು.
‘ಕಲ್ಯಾಣ ಮಂಟಪ ಕಟ್ಟಡಕ್ಕೆ ಭೂಮಿಪೂಜೆ ಮಾಡಿದ್ದು ಜನರಿಗೂ ಸಂತಸ ತಂದಿದೆ. ಇಂತಹ ಕಾರ್ಯಕ್ಕೆ ಭಕ್ತರು ತನುಮನ ಧನದಿಂದ ಸೇವೆ ಸಲ್ಲಿಸಬೇಕು’ ಎಂದರು.
ಈ ವೇಳೆ ಶಶಿಧರಯ್ಯ ಹಿರೇಮಠ, ಮಠದ ಮಹಾದೇವ ಸ್ವಾಮೀಜಿ, ಹಂಚ್ಯಾಲಪ್ಪ ಚಿಲವಾಡಿಗಿ, ನಿಂಗಪ್ಪ ಬ್ಯಾಳಿ, ಬೀಮಪ್ಪ ಮುರಿಗಿ, ಮಲ್ಲಪ್ಪ ಗೋರಿ, ಗವಿಸಿದ್ದಪ್ಪ ದೊಡ್ಡಮನಿ, ಪಕ್ಕಪ್ಪ ತಂಗೋಡಿ, ರಾಮಪ್ಪ ನಿಟ್ಟಾಲಿ, ಶರಣಪ್ಪ ಗಮಾನಿ, ಮುತ್ತಪ್ಪ ಗೋರಿ, ಶರಣಯ್ಯ ಡಂಬಳಮಠ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.