ADVERTISEMENT

ಕುಷ್ಟಗಿ: ಅನಧಿಕೃತ ಬಯೊ ಡೀಸೆಲ್‌ ಜಪ್ತಿ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2021, 7:39 IST
Last Updated 7 ಅಕ್ಟೋಬರ್ 2021, 7:39 IST

ಕುಷ್ಟಗಿ: ರಾಷ್ಟಿಯ ಹೆದ್ದಾರಿಯಲ್ಲಿನ ಕ್ಯಾದಿಗುಪ್ಪಾ ಬಳಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಬಯೊಡೀಸೆಲ್‌ ಮತ್ತು ಟ್ಯಾಂಕರ್ ಅನ್ನು ಇಲ್ಲಿಯ ಪೊಲೀಸರು ಜಪ್ತಿ ಮಾಡಿದ್ದಾರೆ.

ಲಾರಿಯಲ್ಲಿನ ಟ್ಯಾಂಕರ್‌ ದಲ್ಲಿಅನಧಿ ಕೃತವಾಗಿ ಬಯೊಡೀಸೆಲ್‌ ತುಂಬಿಕೊಂಡು ಸಾಗಿಸಲಾಗುತ್ತಿದೆ ಎಂಬ ಸುಳಿವಿನ ಮೇರೆಗೆ ಪರಿಶೀಲನೆ ನಡೆಸಿದ ಆಹಾರ ಇಲಾಖೆ ಸಿಬ್ಬಂದಿ ಯಾವುದೇ ದಾಖಲೆಗಳು ಇಲ್ಲದೆ ಟ್ಯಾಂಕರ್‌ನಲ್ಲಿ 800 ಲೀಟರ್ ಬಯೊಡೀಸೆಲ್‌ ಇರುವುದು ಮತ್ತುರಸ್ತೆ ಬದಿಯಲ್ಲಿ ಟ್ಯಾಂಕರ್‌ದಿಂದ ಬಯೊಡೀಸೆಲ್‌ ಅನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವುದನ್ನು ಪತ್ತೆಹಚ್ಚಿದ್ದಾರೆ.

ಸುರಕ್ಷತೆ ನಿಯಮ ಅನುಸರಿಸದೆ ಬಯೊಡೀಸೆಲ್‌ ಮಾರಾಟ ಮಾಡುತ್ತಿರುವ ಕುರಿತು ಆಹಾರ ಇಲಾಖೆ ನಿರೀಕ್ಷಕ ನಿತಿನ್ ಅಗ್ನಿ ನೀಡಿರುವ ದೂರಿನ ಅನ್ವಯ ಎಫ್‌ಐಆರ್ ದಾಖಲಿಸಲಾಗಿದ್ದು ಬಯೊಡೀಸೆಲ್‌ ಟ್ಯಾಂಕರ್ ಸಹಿತ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಬ್ ಇನ್‌ಸ್ಪೆಕ್ಟರ್ ತಿಮ್ಮಣ್ಣ ನಾಯಕ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.