ADVERTISEMENT

ಬಿಜೆಪಿಯವರು ಸತ್ತರೆ ₹1 ಕೋಟಿ ಪರಿಹಾರ: ಶಾಸಕ ಬಯ್ಯಾಪುರ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2021, 18:38 IST
Last Updated 6 ಅಕ್ಟೋಬರ್ 2021, 18:38 IST
ಶಾಸಕ ಅಮರೇಗೌಡ ಬಯ್ಯಾಪುರ
ಶಾಸಕ ಅಮರೇಗೌಡ ಬಯ್ಯಾಪುರ   

ಕುಷ್ಟಗಿ (ಕೊಪ್ಪಳ ಜಿಲ್ಲೆ): ‘ಉತ್ತರ ಪ್ರದೇಶದ ಲಖಿಂಪುರ– ಖೇರಿ ಬಳಿ ಪ್ರತಿಭಟನೆ ವೇಳೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವರ ಪುತ್ರನ ಕಾರು ಹರಿದು ಮೃತರಾದ ರೈತ ಕುಟುಂಬಗಳಿಗೆ ಅಲ್ಲಿಯ ಬಿಜೆಪಿ ಸರ್ಕಾರ ಕೇವಲ ₹45 ಲಕ್ಷ ಪರಿಹಾರ ನೀಡುತ್ತಿದೆ. ಇಂತಹ ಘಟನೆಯಲ್ಲಿ ಬಿಜೆಪಿಯ ಯಾವುದೇ ಮುಖಂಡ ಸತ್ತರೂ ಕಾಂಗ್ರೆಸ್ ಪಕ್ಷದಿಂದ ₹1 ಕೋಟಿ ಪರಿಹಾರ ನೀಡುತ್ತೇವೆ’ ಎಂದು ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದರು.

ಲಖಿಂಪುರ ಘಟನೆ ಖಂಡಿಸಿ ಕಾಂಗ್ರೆಸ್‌ನಿಂದ ಇಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಶಾಸಕರು ಮಾತನಾಡಿದ ವಿಡಿಯೊ ವೈರಲ್‌ ಆಗಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಹಳ್ಳೂರು, ‘ಹೀಗೆ ಹೇಳುವ ಮೂಲಕ ಶಾಸಕರು ಬಿಜೆಪಿ ಮುಖಂಡರನ್ನು ಕೊಲೆಗೈಯುವುದಕ್ಕೆ ಪ್ರಚೋದನೆ ನೀಡಿದ್ದಾರೆ’ ಎಂದು ಹರಿಹಾಯ್ದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.