ADVERTISEMENT

ತಾವರಗೇರಾ | ರಸ್ತೆಯಲ್ಲಿ ತುಂಡಾದ ಬಸ್ಸಿನ ಚಕ್ರ: ತಪ್ಪಿದ ಅನಾಹುತ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 6:35 IST
Last Updated 12 ಆಗಸ್ಟ್ 2025, 6:35 IST
ತಾವರಗೇರಾ - ಕುಷ್ಟಗಿ‌ ಮುಖ್ಯ ರಸ್ತೆಯ ನಂದಾಪೂರ ಕ್ರಾಸ್ ಹತ್ತಿರ ಸೋಮವಾರ ಚಕ್ರ ಮುರಿದು ರಸ್ತೆಯಲ್ಲಿ ನಿಂತಿರುವ ಬಸ್
ತಾವರಗೇರಾ - ಕುಷ್ಟಗಿ‌ ಮುಖ್ಯ ರಸ್ತೆಯ ನಂದಾಪೂರ ಕ್ರಾಸ್ ಹತ್ತಿರ ಸೋಮವಾರ ಚಕ್ರ ಮುರಿದು ರಸ್ತೆಯಲ್ಲಿ ನಿಂತಿರುವ ಬಸ್   

ತಾವರಗೇರಾ: ಪಟ್ಟಣದಿಂದ‌ ಕುಷ್ಟಗಿ ಸಂಪರ್ಕ‌ ಮುಖ್ಯರಸ್ತೆಯ ನಂದಾಪೂರ ಕ್ರಾಸ್ ಹತ್ತಿರ 35 ಜನ ಪ್ರಯಾಣಿಕರಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಚಕ್ರ ತುಂಡಾಗಿದ್ದು, ಬಸ್‌ ಚಾಲಕನ ಚಾಣಾಕ್ಷತನದಿಂದ ಅನಾಹುತ ತಪ್ಪಿದೆ.

ಕೊಪ್ಪಳದಿಂದ ಕುಷ್ಟಗಿ‌ ಮಾರ್ಗವಾಗಿ ಹೊರಟಿದ್ದ ಬೀದರ್‌ ಜಿಲ್ಲೆಯ ಭಾಲ್ಕಿ ಡಿಪೊ ಬಸ್, ಬೆಳಿಗ್ಗೆ 7 ಗಂಟೆಗೆ ನಂದಾಪೂರ ಕ್ರಾಸ್‌ ದಾಟಿತ್ತು. ಈ ವೇಳೆ ಬಸ್ಸಿನ ಎಡ ಭಾಗದ ಹಿಂದಿನ ಎರಡು ಚಕ್ರಗಳು ತುಂಡಾಗಿ ಪಕ್ಕದ ಹೊಲದಲ್ಲಿ ಬಿದ್ದಿವೆ. ಆದರೆ ಯಾವುದೇ ಪ್ರಾಣಾಪಾಯ‌ ಮತ್ತು ಅನಾಹುತ ಸಂಭವಿಸಿಲ್ಲ.

‘ದೇವರ ದಯೆಯಿಂದ ಯಾರಿಗೂ ಏನೂ ಆಗಿಲ್ಲ‌. ಬಸ್ ಚಲಿಸುತ್ತಿರುವಾಗ ಚಕ್ರ ಮುರಿದಿದ್ದು, ಗಮನಕ್ಕೆ ಬರುತ್ತಿದ್ದ‌ಂತೆ ನಿಯಂತ್ರಣ ಮಾಡಿದ್ದೇನೆ’ ಎಂದು ಬಸ್ ಚಾಲಕ‌ ನಾಗಪ್ಪ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.