ADVERTISEMENT

ಅಳವಂಡಿ: ಹುಲ್ಲು ಮೇಯುತ್ತಾ ಚಾವಣಿ ಏರಿದ ಕರು

​ಪ್ರಜಾವಾಣಿ ವಾರ್ತೆ
Published 24 ಜುಲೈ 2021, 11:23 IST
Last Updated 24 ಜುಲೈ 2021, 11:23 IST
ಅಳವಂಡಿ ಸಮೀಪದ ಬೆಟಗೇರಿ ಗ್ರಾಮದಲ್ಲಿ ಹುಲ್ಲು ಮೇಯುತ್ತಾ ಮನೆಯ ಚಾವಣಿ ಏರಿದ್ದ ಆಕಳ ಕರುವನ್ನು ಗ್ರಾಮಸ್ಥರು ರಕ್ಷಣೆ ಮಾಡಿ ಕೆಳಗೆ ಇಳಿಸಿದರು
ಅಳವಂಡಿ ಸಮೀಪದ ಬೆಟಗೇರಿ ಗ್ರಾಮದಲ್ಲಿ ಹುಲ್ಲು ಮೇಯುತ್ತಾ ಮನೆಯ ಚಾವಣಿ ಏರಿದ್ದ ಆಕಳ ಕರುವನ್ನು ಗ್ರಾಮಸ್ಥರು ರಕ್ಷಣೆ ಮಾಡಿ ಕೆಳಗೆ ಇಳಿಸಿದರು   

ಅಳವಂಡಿ: ಸಮೀಪದ ಬೆಟಗೇರಿ ಗ್ರಾಮದ ಗುರುಬಸಯ್ಯ ಬೃಹನ್ಮಠ ಎನ್ನುವವರ ಆಕಳ ಕರು ಹುಲ್ಲು ಮೆಯುತ್ತಾ ಮನೆ ಚಾವಣಿ ಏರಿಕೆಳಗೆ ಇಳಿಯಲು ಪರದಾಡಿದ ಪ್ರಸಂಗ ಗುರುವಾರ ನಡೆದಿದೆ.

ಸಮೀಪದ ಬೆಟಗೇರಿ ಗ್ರಾಮದಲ್ಲಿ ಬೆಳಿಗ್ಗೆ ಮನೆಯ ಮಾಲೀಕರು ಕರು ಬಿಟ್ಟು ಕೆಲಸಕ್ಕೆ ಹೋಗಿದ್ದರು. ಸುತ್ತಮುತ್ತಲಿನ ಹುಲ್ಲು ಮೇಯುತ್ತಾ ಬಿದ್ದ ಮನೆಯ ಆಸರೆಯಿಂದ ಚಾವಣಿ ಏರಿ ಅಲ್ಲಿಯೇ ಮೇಯುತ್ತಾ ಕೆಲ ತಾಸು ನಿಂತಿತ್ತು. ಇದನ್ನು ಗಮನಿಸಿದ ಗ್ರಾಮದ ಯುವಕರು ಏಣಿ ಮೂಲಕ ಕರುವಿಗೆ ಹಗ್ಗ ಕಟ್ಟಿ ಕೆಳಗೆ ಇಳಿಸುವ ಮೂಲಕ ಮಾನವೀಯತೆ ಮೆರೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT