ADVERTISEMENT

ಕಾರಟಗಿ | ‘ಮಕ್ಕಳಿಗೆ ಪಠ್ಯೇತರ ಚಟುವಟಿಕೆ ಅಗತ್ಯ’

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 4:46 IST
Last Updated 16 ನವೆಂಬರ್ 2025, 4:46 IST
ಕಾರಟಗಿ ಸಮೀಪದ ಬೇವಿನಹಾಳ ಸರ್ಕಾರಿ ಶಾಲೆಯಲ್ಲಿ ನಡೆದ ಪೋಷಕರ–ಶಿಕ್ಷಕರ ಸಭೆಯಲ್ಲಿ ತಾ.ಪಂ ಇಒ ಲಕ್ಷ್ಮೀದೇವಿ ಮಾತನಾಡಿದರು
ಕಾರಟಗಿ ಸಮೀಪದ ಬೇವಿನಹಾಳ ಸರ್ಕಾರಿ ಶಾಲೆಯಲ್ಲಿ ನಡೆದ ಪೋಷಕರ–ಶಿಕ್ಷಕರ ಸಭೆಯಲ್ಲಿ ತಾ.ಪಂ ಇಒ ಲಕ್ಷ್ಮೀದೇವಿ ಮಾತನಾಡಿದರು   

ಕಾರಟಗಿ: ‘ಮಕ್ಕಳ ಜೀವನ ಉತ್ತಮವಾಗಿ ರೂಪಿಸುವಲ್ಲಿ ಶಿಕ್ಷಕರು ಮಕ್ಕಳನ್ನು ಪಠ್ಯೇತರ ಚಟುವಟಿಕೆಯಲ್ಲಿಯೂ ಕ್ರಿಯಾಶೀಲವಾಗಿರುವಂತೆ ಮಾಡಬೇಕು. ಪೋಷಕರು, ಶಿಕ್ಷಕರು ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಿದರೆ ಮಕ್ಕಳ ಭವಿಷ್ಯ ಉತ್ತಮವಾಗಿ ರೂಪುಗೊಳ್ಳುತ್ತದೆ’ ಎಂದು ತಾಲ್ಲೂಕು ಪಂಚಾಯಿತಿ ಇಒ ಲಕ್ಷ್ಮೀದೇವಿ ಹೇಳಿದರು.

ಸಮೀಪದ ಬೇವಿನಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಶುಕ್ರವಾರ ನಡೆದ ಪೋಷಕರ ಹಾಗೂ ಶಿಕ್ಷಕರ ಮಹಾಸಭೆಯಲ್ಲಿ ಅವರು ಮಾತನಾಡಿದರು.

‘ಮಕ್ಕಳ ಬದುಕು ರೂಪಿಸುವ ಜೊತೆಗೆ ಜೀವನ ಪಾಠದ ತರಬೇತಿಯನ್ನೂ ನೀಡಬೇಕು. ಮಕ್ಕಳ ಉಜ್ವಲ ಭವಿಷ್ಯಕ್ಕೆ ಒಳ್ಳೆಯ ಗುರು ಹಾಗೂ ಗುರಿ ಅಗತ್ಯ’ ಎಂದರು.

ADVERTISEMENT

ಗ್ರಾಪಂ ಸದಸ್ಯೆ ಲಕ್ಷ್ಮೀ ಮಲ್ಲಯ್ಯ, ಮಾಜಿ ಎಪಿಎಂಸಿ ನಿರ್ದೇಶಕ ಶಿವಪ್ಪ ಆರಾಪುರ, ಎಸ್‌ಡಿಎಂಸಿ ಅಧ್ಯಕ್ಷ ಶರಣಪ್ಪ ಬೇವಿನಹಾಳ, ಉಪಾಧ್ಯಕ್ಷ ಬಸವರಾಜ, ಪಿಡಿಒ ಪ್ರಕಾಶ ಹಿರೇಮಠ, ಸಿಆರ್‌ಪಿ ತಿಮ್ಮಣ್ಣ ನಾಯಕ, ಮಲ್ಲೇಶ.ಕೆ, ಶಿಕ್ಷಕ ರಂಗಪ್ಪ, ಭಾಗೀರಥಿ, ಹನುಮಂತಪ್ಪ.ಕೆ, ಅಂಬಮ್ಮ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.