ADVERTISEMENT

ಮಕ್ಕಳೇ ದೇಶದ ಆಸ್ತಿ: ರಾಮಣ್ಣ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2019, 9:52 IST
Last Updated 28 ನವೆಂಬರ್ 2019, 9:52 IST
ಕುಕನೂರು ತಾಲ್ಲೂಕಿನ ಮಸಬಹಂಚಿನಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ  ಮಕ್ಕಳ ದಿನಾಚರಣೆ ಅಂಗವಾಗಿ ಆಟೋಟ ಏರ್ಪಡಿಸಲಾಗಿತ್ತು 
ಕುಕನೂರು ತಾಲ್ಲೂಕಿನ ಮಸಬಹಂಚಿನಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ  ಮಕ್ಕಳ ದಿನಾಚರಣೆ ಅಂಗವಾಗಿ ಆಟೋಟ ಏರ್ಪಡಿಸಲಾಗಿತ್ತು    

ಕುಕನೂರು: ಮಕ್ಕಳಿಗಾಗಿ ಆಸ್ತಿಯನ್ನು ಮಾಡಬೇಡಿ. ಮಕ್ಕಳನ್ನೇ ಆಸ್ತಿಯನ್ನಾಗಿಸಿ ಎಂದು ಮುಖ್ಯಶಿಕ್ಷಕ ರಾಮಣ್ಣ ತಳವಾರ ಸಲಹೆ ನೀಡಿದರು.

ತಾಲ್ಲೂಕಿನ ಮಸಬಹಂಚಿನಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ‘ಮಕ್ಕಳ ದಿನಾಚರಣೆ’ ಉದ್ಘಾಟಿಸಿ ಅವರು ಮಾತನಾಡಿದರು.ಮಕ್ಕಳು ಈ ದೇಶದ ಭವಿಷ್ಯ ಮತ್ತು ಆಸ್ತಿ ಎಂದು ಮಾಜಿ ಪ್ರಧಾನಿ ಜವಹಾರಲಾಲ ನೆಹರೂ ಹೇಳಿದ್ದಾರೆ. ಪೋಷಕರು ಮಕ್ಕಳನ್ನು ಪ್ರೋತ್ಸಾಹಿಸಬೇಕು ಎಂದು ನುಡಿದರು

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೆಕು ಎಂದು ಹೇಳಿದರು.ವಿದ್ಯಾರ್ಥಿಗಳಿಗಾಗಿ ಕೆರೆದಡ, ಮೂಸಿಕಲ್ ಚೇರ್, ಗಾಳಿಯಲ್ಲಿ ಚೆಂಡು, ಬಾಲ್ ಪಾಸಿಂಗ್ ಸ್ಪ‍ರ್ಧೆಗಳನ್ನು ಏರ್ಪಡಿಸಲಾಗಿತ್ತು. ಚಿದಾನಂದ ಪತ್ತಾರ, ಪ್ರಭು ವಕ್ಕಳದ, ಬಸವನಗೌಡ ಪಾಟೀಲ, ಗಫರಸಾಬ್ ನದಾಪ್, ಸಾಧಿಕಾ ಬೇಗಂ, ಕಲ್ಲಪ್ಪ ಕಟಗಿಹಳ್ಳಿ, ನಂದಿನಿಕುಮಾರಿ, ಜಲಜಾಕ್ಷಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.