ADVERTISEMENT

ಗಂಗಾವತಿ: ಮಕ್ಕಳ ಹಕ್ಕುಗಳ ಜಾಗೃತಿ ಕಾರ್ಯಕ್ರಮ

ಮರಳಿ: ಮಕ್ಕಳ ಗ್ರಾಮಸಭೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2022, 13:06 IST
Last Updated 7 ಮಾರ್ಚ್ 2022, 13:06 IST
ಆಚಾರನರಸಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದ ಮಕ್ಕಳ ಗ್ರಾಮಸಭೆಗೆ ಮರಳಿ ಗ್ರಾ.ಪಂ ಅಧ್ಯಕ್ಷೆ ಶ್ರೀದೇವಿ ಜಂಬಣ್ಣ ತಾಳೂರು ಚಾಲನೆ ನೀಡಿದರು. ಗಣ್ಯರು ಇದ್ದರು.
ಆಚಾರನರಸಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದ ಮಕ್ಕಳ ಗ್ರಾಮಸಭೆಗೆ ಮರಳಿ ಗ್ರಾ.ಪಂ ಅಧ್ಯಕ್ಷೆ ಶ್ರೀದೇವಿ ಜಂಬಣ್ಣ ತಾಳೂರು ಚಾಲನೆ ನೀಡಿದರು. ಗಣ್ಯರು ಇದ್ದರು.   

ಮರಳಿ (ಗಂಗಾವತಿ): ‘ಮಕ್ಕಳ ಹಕ್ಕುಗಳ ಜಾಗೃತಿ ಕುರಿತು ಗ್ರಾ.ಪಂ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಮಕ್ಕಳ ಗ್ರಾಮಸಭೆ ನಡೆಸಬೇಕು. ಇದರಿಂದ ಮಕ್ಕಳ ಸಮಸ್ಯೆಗಳು ಆಲಿಸಲು ಸುಲಭವಾಗುತ್ತದೆ’ ಎಂದು ಮರಳಿಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀದೇವಿ ಜಂಬಣ್ಣ ತಾಳೂರು ಹೇಳಿದರು.

ತಾಲ್ಲೂಕಿನ ಆಚಾರನರಸಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದ ಮಕ್ಕಳ ಗ್ರಾಮಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಮಕ್ಕಳು ಗ್ರಾಮಸಭೆಯ ಮೂಲಕ ನೇರವಾಗಿ ತಮ್ಮ ಸಮಸ್ಯೆಗಳನ್ನು ಪಂಚಾಯಿತಿಗೆ ತಿಳಿಸಿ ಪರಿಹಾರ ಕಂಡುಕೊಂಡಾಗ ಮಾತ್ರ ಮಕ್ಕಳು ಸಮಾಜದಲ್ಲಿ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ.

ADVERTISEMENT

ಗ್ರಾ.ಪಂ ಅಧಿಕಾರಿಗಳು ಮಕ್ಕಳ ಸಮಸ್ಯೆಗಳು ಪರಿಹರಿಸುವ ಜೊತೆಗೆ ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಹಾಗೇ ಗ್ರಾ.ಪಂನಲ್ಲಿ ದೊರಕುವ ಸೌಲಭ್ಯಗಳ ಕುರಿತು ನಡಾವಳಿ ರಚಿಸಿ ಸರ್ಕಾರದ ಗಮನಕ್ಕೆ ತಂದು ಅನುಷ್ಠಾನಗೊಳಿಸಬೇಕು ಎಂದರು.

ಪಿಡಿಒ ಸಲ್ಮಾ ಬೇಗಂ ಮಾತನಾಡಿ, ಮಕ್ಕಳಿಗೆ ಬದುಕುವ ಹಕ್ಕು, ರಕ್ಷಣೆಯ ಹಕ್ಕು, ವಿಕಾಸ ಹೊಂದುವ ಹಕ್ಕು, ಭಾಗವಹಿಸುವ ಹಕ್ಕುಗಳ ಬಗ್ಗೆ ಮಾಹಿತಿ ನೀಡಿದರು.

ನಾಗಪದ್ಮಾವತಿ, ವೆಂಕಟಕನಕ ದುರ್ಗಾರಾವ್, ಬಸವರಾಜಪ್ಪ, ಯುವರಾಜ, ಕೆಂಚಪ್ಪ, ಷಣ್ಮುಖಪ್ಪ, ಲಿಂಗಪ್ಪ ಬರಗೂರು, ಹುಸೆನಮ್ಮ, ಶರಣಪ್ಪ, ಸುಂಕಪ್ಪ, ಸುರೇಶ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.