ಯಲಬುರ್ಗಾ: ಸ್ಥಳೀಯ ಎಸ್‍ಎ ನಿಂಗೋಜಿ ಬಿ.ಇಡ್ ಕಾಲೇಜಿನಲ್ಲಿ ಪೌರತ್ವ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಚಾಲನೆ ನೀಡಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಪಾಟೀಲ ಮಾತನಾಡಿ, ದೇಶವನ್ನು ಕಟ್ಟುವ ನಾಯಕರನ್ನು ಸೃಷ್ಟಿಸುವ ಮಹತ್ವದ ಜವಾಬ್ದಾರಿ ಹೊರಲಿರುವ ಪ್ರಶಿಕ್ಷಣಾರ್ಥಿಗಳು ನಾಗರಿಕ ಸಮಾಜದಲ್ಲಿ ಉತ್ತಮ ರೀತಿಯಲ್ಲಿ ನಡೆದುಕೊಳ್ಳಬೇಕು. ಸಮುದಾಯ ಸಂಘಟನೆಯಲ್ಲಿ ಸುಧಾರಣ ಕ್ರಮಗಳನ್ನು ಅನುಸಿರುವುದು, ಸಮುದಾಯದಲ್ಲಿನ ಆರೋಗ್ಯ, ಸ್ವಚ್ಛತೆಗೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳ ಕುರಿತು ಈ ಪೌರತ್ವ ತರಬೇತಿಯಲ್ಲಿ ತಿಳಿಸಲಾಗುತ್ತದೆ. ಪ್ರತಿಯೊಬ್ಬರು ಈ ತರಬೇತಿಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಧ್ವಜಾರೋಹಣ ನೆರವೇರಿಸಿದ ಮಂಜುನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಮಾತನಾಡಿ, ಶ್ರಮ ಸಂಸ್ಕೃತಿ ಹಾಗೂ ಮಾನವೀಯ ಮೌಲ್ಯಗಳನ್ನು ಕಲಿಯುವ ಒಂದು ವೇದಿಕೆ ಇದಾಗಿದೆ. ವಿವಿಧ ವಿಷಯಗಳ ಉಪನ್ಯಾಸಗಳು ಪ್ರಶಿಕ್ಷಣಾರ್ಥಿಗಳಿಗೆ ಹೆಚ್ಚಿನ ಜ್ಞಾನವನ್ನು ನೀಡಬಲ್ಲವು ಎಂದು ಅಭಿಪ್ರಾಯಪಟ್ಟರು.
ಅಪರ ಸರ್ಕಾರಿ ವಕೀಲ ಎಂ.ಎಸ್.ಪಾಟೀಲ, ಪ್ರಾಚಾರ್ಯ ಬಸನಗೌಡ ಪಾಟೀಲ, ರಾಜಶೇಖರ ನಿಂಗೋಜಿ ಮಾತಾಡಿದರು. ಟ್ರಸ್ಟ್ ಅಧ್ಯಕ್ಷ ಶಶಿಕಾಂತ ನಿಂಗೋಜಿ, ರತ್ನಮ್ಮ ನಿಂಗೋಜಿ, ರವಿ ಸೇರಿ ಅನೇಕರು ಇದ್ದರು. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ವೀರಣ್ಣ ನಿಂಗೋಜಿ ಅಧ್ಯಕ್ಷತೆ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.