ADVERTISEMENT

ಕುಷ್ಟಗಿ: ಹುತಾತ್ಮರಿಗೆ ಶ್ರದ್ಧಾಂಜಲಿ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2021, 12:29 IST
Last Updated 11 ಡಿಸೆಂಬರ್ 2021, 12:29 IST
ಹೆಲಿಕಾಪ್ಟರ್‌ ದುರದಂತದಲ್ಲಿ ಹುತಾತ್ಮರಾದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಇತರೆ ಸೈನಿಕರಿಗೆ ಕುಷ್ಟಗಿಯಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಶ್ರದ್ಧಾಂಜಲಿ ಸಲ್ಲಿಸಿದರು
ಹೆಲಿಕಾಪ್ಟರ್‌ ದುರದಂತದಲ್ಲಿ ಹುತಾತ್ಮರಾದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಇತರೆ ಸೈನಿಕರಿಗೆ ಕುಷ್ಟಗಿಯಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಶ್ರದ್ಧಾಂಜಲಿ ಸಲ್ಲಿಸಿದರು   

ಕುಷ್ಟಗಿ: ಹೆಲಿಕಾಪ್ಟರ್‌ ದುರಂತದಲ್ಲಿ ಹುತಾತ್ಮರಾದ ಭಾರತೀಯ ಸೇನಾ ಪಡೆಗಳ ಮುಖ್ಯಸ್ಥ (ಸಿಡಿಎಸ್‌) ಬಿಪಿನ್ ರಾವತ್ ಮತ್ತು ಅವರ ಪತ್ನಿ ಹಾಗೂ ಇತರೆ ಸೈನಿಕರಿಗೆ ಪಟ್ಟಣದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಶ್ರದ್ಧಾಂಜಲಿ ಸಲ್ಲಿಸಿದರು.

ಹೈದರಾಬಾದ್ ಕರ್ನಾಟಕ ಯುವಶಕ್ತಿ ಸಂಘಟನೆ ನೇತೃತ್ವದಲ್ಲಿ ಕಾರ್ಗಿಲ್‌ ಹುತಾತ್ಮ ಯೋಧ ಮಲ್ಲಯ್ಯ ವೃತ್ತದಲ್ಲಿ ಬಿಪಿನ್‌ ರಾವತ್‌ ಅವರ ಭಾವಚಿತ್ರಕ್ಕೆ ಪುರಸಭೆ ಅಧ್ಯಕ್ಷ ಜಿ.ಕೆ.ಹಿರೇಮಠ, ಮುಖಂಡ ಕೆ.ಮಹೇಶ್‌ ಮತ್ತಿತರರು ಪುಷ್ಪನಮನದೊಂದಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೇಣದ ದೀಪಗಳ ಮೆರವಣಿಗೆ ನಡೆಸಿ ಮೃತ ಯೋಧರಿಗೆ ಗೌರವ ಸಮರ್ಪಿಸಲಾಯಿತು.

ADVERTISEMENT

ಈ ಸಂದರ್ಭದಲ್ಲಿ ಮಾತನಾಡಿದ ತಾಲ್ಲೂಕು ಮಾಜಿ ಸೈನಿಕರ ಸಂಘದ ಸದಸ್ಯರಾದ ಭೀಮನಗೌಡ ಜಾಲಿಹಾಳ, ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ನಜೀರಸಾಬ್ ಮೂಲಿಮನಿ, ಹೈದರಾಬಾದ್ ಕರ್ನಾಟಕ ಯುವಶಕ್ತಿ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಗಾಣಿಗೇರ,‘ಸೇನಾ ಪಡೆಗಳ ಮುಖ್ಯಸ್ಥರಾದ ಬಿಪಿನ್ ರಾವತ್ ಅವರು ಧೈರ್ಯ, ಶೌರ್ಯ ಹಾಗೂ ಸಾಹಸದ ಬದುಕಿನಿಂದ ದೇಶದ ಸಶಸ್ತ್ರ ಪಡೆಗಳನ್ನು ಪ್ರಬಲಗೊಳಿಸುವಲ್ಲಿ ಶ್ರಮಿಸಿದ್ದರು. ಮೂರೂ ಸೇನಾ ಪಡೆಗಳ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದರು. ರಾವತ್ ಮತ್ತಿತರೆ ಯೋಧರ ತ್ಯಾಗದ ಸೇವೆಯನ್ನು ದೇಶದ ಪ್ರತಿಯೊಬ್ಬ ಪ್ರಜೆ ಸ್ಮರಿಸಬೇಕಿದೆ’ ಎಂದರು.

ಮಾಜಿ ಸೈನಿಕರ ಸಂಘದ ವಿಜಯಕುಮಾರ ಮಾದಾಪುರ, ಶರಣಯ್ಯ ಹಿರೇಮಠ, ಬಸನಗೌಡ ಪಾಟೀಲ, ಯಲ್ಲಪ್ಪ. ಸಬ್‌ ಇನ್‌ಸ್ಪೆಕ್ಟರ್ ತಿಮ್ಮಣ್ಣ ನಾಯಕ, ರೈತ ಮುಖಂಡ ಶಂಕರಗೌಡ ಬೀಳಗಿ, ಬಸವರಾಜ ಅಮ್ಮಣ್ಣನವರ, ಮಹಿಬೂಬ್ ಕೇಸೂರು, ವೀರೇಶ ಕರಡಿ, ಕಿರಣ್ ಜ್ಯೋತಿ, ಬಸವರಾಜ ತಿಮ್ಮಾಪೂರ, ರಾಮಣ್ಣ ಭಜಂತ್ರಿ, ಮಂಜುನಾಥ ತಳವಗೇರಾ, ಮಂಜುನಾಥ ಕಜ್ಜಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.