
ಕುಕನೂರು: ಸಂವಿಧಾನದ ಮೂಲ ಆಶಯಗಳನ್ನು ಪಾಲಸುವ ಮೂಲಕ ದೇಶದ ಅಭ್ಯುದಯಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್.ವಿ.ಡಾಣಿ ಹೇಳಿದರು.
ತಾಲ್ಲೂಕಿನ ತಳಕಲ್ ಗ್ರಾಮದ ವಿಶ್ವವಿದ್ಯಾಲಯದಲ್ಲಿ 77ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
‘ಹೋರಾಟಗಾರರ ತ್ಯಾಗ, ಬಲಿದಾನಗಳ ಫಲವಾಗಿ ದೊರೆತ ಸ್ವಾತಂತ್ರ್ಯ ಹಾಗೂ ಸಂವಿಧಾನದ ಆದರ್ಶಗಳನ್ನು ಪ್ರತಿಯೊಬ್ಬರೂ ಗೌರವಿಸಬೇಕು’ ಎಂದರು.
ಕುಲಸಚಿವ ಪ್ರೊ.ಕೆ.ರಮೇಶ, ಆಡಳಿತಾಧಿಕಾರಿ ಪ್ರೊ.ತಿಮ್ಮಾರೆಡ್ಡಿ ಮೇಟಿ, ಡಾ.ವೀರೇಶ ಉತ್ತಂಗಿ, ಡಾ.ಪ್ರಿಯಾಂಕ ಕೊನ್ನೂರ, ಡಾ.ಬಸವರಾಜ ಗಡಾದ, ಡಾ.ಪ್ರವೀಣ ಪೊಲೀಸಪಾಟೀಲ, ಡಾ.ಪಾರ್ವತಿ ಕನಕಗಿರಿ, ನಾಗರಾಜ, ಮೌಲಸಾಬ, ಪ್ರಕಾಶ ಕುರಿ, ತೌಫಿಕ ಅಹ್ಮದ, ಗಂಗಾಧರ, ಗಿರೀಶ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.