ADVERTISEMENT

ನಿಯಮ ಪಾಲನೆಯಿಂದ ಸೋಂಕು ದೂರ: ಹಿರೇಮಠ

​ಪ್ರಜಾವಾಣಿ ವಾರ್ತೆ
Published 5 ಮೇ 2021, 4:14 IST
Last Updated 5 ಮೇ 2021, 4:14 IST
ಕೊಪ್ಪಳ ತಾಲ್ಲೂಕಿನ ಅಳವಂಡಿ ಸಮೀಪದ ಗುಡಗೇರಿ ಗ್ರಾಮದಲ್ಲಿ ಮನೆ–ಮನೆಗೆ ತೆರಳಿ ಜಾಗೃತಿ ಮೂಡಿಸಲಾಯಿತು
ಕೊಪ್ಪಳ ತಾಲ್ಲೂಕಿನ ಅಳವಂಡಿ ಸಮೀಪದ ಗುಡಗೇರಿ ಗ್ರಾಮದಲ್ಲಿ ಮನೆ–ಮನೆಗೆ ತೆರಳಿ ಜಾಗೃತಿ ಮೂಡಿಸಲಾಯಿತು   

ಅಳವಂಡಿ: ‘ಮಾರ್ಗಸೂಚಿ ಪಾಲನೆ ಕೊರೊನಾ ಸೋಂಕಿಗೆ ಮದ್ದು. ಜನ ಗುಂಪು ಗುಂಪಾಗಿ ಸೇರಬಾರದು’ ಎಂದು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮಂಜುನಾಥಯ್ಯ ಹಿರೇಮಠ ಹೇಳಿದರು.

ಅಳವಂಡಿ ಸಮೀಪದ ಕವಲೂರ ಹಾಗೂ ಗುಡಗೇರಿ ಗ್ರಾಮಗಳಲ್ಲಿ ಕೊರೊನಾ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ
ಮಾತನಾಡಿದರು.

ಪ್ರತಿಯೊಬ್ಬರೂ ಕೊರೊನಾ ನಿಯಂತ್ರಣಕ್ಕೆ ಸಹಕರಿಸಬೇಕು. 45 ವರ್ಷ ಮೇಲ್ಪಟ್ಟ ಹಾಗೂ ಇತರರು ಕೊರೊನಾ ಲಸಿಕೆ ಪಡೆದುಕೊಳ್ಳಬೇಕು. ಲಸಿಕೆಯಿಂದ ಅಡ್ಡಪರಿಣಾಮಗ
ಳಾಗುವುದಿಲ್ಲ. ಅರ್ಹರು ಲಸಿಕೆ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.

ADVERTISEMENT

ಅಧ್ಯಕ್ಷೆ ಜ್ಯೋತಿ ಮಾಹಾಂತೇಶ ಸಿಂದೋಗಿಮಠ, ಸಿಬ್ಬಂದಿ ಲಿಂಗರಾಜ್, ಅಶೋಕ, ಷರೀಫ್, ವೇಂಕಟೇಶ, ಮುಖಂಡರಾದ ಮಾಹಾಂತೇಶ ಸಿಂದೋಗಿಮಠ ಹಾಗೂ ಗ್ರಾ.ಪಂ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.