ADVERTISEMENT

ಗಂಗಾವತಿ | ಖೋಟಾ ನೋಟು ಪ್ರಕರಣ: ಐವರ ಬಂಧನ

​ಪ್ರಜಾವಾಣಿ ವಾರ್ತೆ
Published 13 ಮೇ 2025, 16:04 IST
Last Updated 13 ಮೇ 2025, 16:04 IST
<div class="paragraphs"><p>ಬಂಧನ </p></div>

ಬಂಧನ

   

ಗಂಗಾವತಿ: ನಗರದ ಕೊಪ್ಪಳ ರಸ್ತೆಯಲ್ಲಿನ ಸಮರ್ಥ ಬಾರ್ ಹಾಗೂ ರೆಸ್ಟೋರೆಂಟ್‌ನಲ್ಲಿ ಮದ್ಯ ಖರೀದಿ ಮಾಡಲು ಬಂದು ಖೋಟಾನೋಟು ಚಲಾವಣೆಗೆ ಯತ್ನಿಸಿದ ಪ್ರಕರಣ‌ ಸಂಬಂಧ ಸೋಮವಾರ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಹೊಸಪೇಟೆ ಖಾಲಂದರಖಾನ್, ಸಂಡೂರಿನ ಬಿ.ನೂರಮುಸ್ತಫ್, ಗಜೇಂದ್ರಗಡದ ವೀರೇಶ, ಕೆರೂರು ಗ್ರಾಮದ ಸರ್ಫರಾಜ್, ಬಿಂಕದಕಟ್ಟೆಯ ಅಬ್ದುಲ್ ರಜಾಕ್ ಎಂದು ಗುರುತಿಸಲಾಗಿದೆ.

ADVERTISEMENT

ಬಂಧನದ ನಂತರ ₹500 ಮುಖ ಬೆಲೆಯ ₹78,500 ಹಣದ ಖೋಟಾ ನೋಟು, ₹36,500 ಅಸಲಿ ನೋಟುಗಳು ವಶಕ್ಕೆ ಪಡೆಯಲಾಗಿದೆ. ಖೋಟಾ ನೋಟು ಚಲಾವಣೆ ಮಾಡುತ್ತಿರುವ ಜಾಲ ಮತ್ತು ಕೃತ್ಯಕ್ಕೆ ಬಳಸಿದ ಸಾಮಗ್ರಿಗಳ ಪತ್ತೆ ಕಾರ್ಯ ನಡೆಸಲಾಗುತ್ತಿದೆ. ಆರೋಪಿಗಳು ಖೋಟಾ ನೋಟು ಚಲಾವಣೆ ಮಾಡುವ ಉದ್ದೇಶದಿಂದಲೇ ಬಾರ್‌ನಲ್ಲಿ ಮದ್ಯ ಖರೀದಿ ಮಾಡಿ, ನೋಟು ಚಲಾವಣೆಗೆ ಮುಂದಾದಾಗ ಅಂಗಡಿಯವರು ನೋಟು ಪರಿಶೀಲಿಸಿದ್ದು, ಈ ವೇಳೆ ಖೋಟಾನೋಟುಗಳು ಎಂದು ತಿಳಿದು ಬಂದಿವೆ. ಕೂಡಲೇ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು,ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.