ADVERTISEMENT

ಪಿಡಿಒಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ

ನರೇಗಾ ಯೋಜನೆ ಅನುದಾನ ದುರ್ಬಳಕೆ ಆರೋಪ

​ಪ್ರಜಾವಾಣಿ ವಾರ್ತೆ
Published 7 ಜೂನ್ 2020, 13:34 IST
Last Updated 7 ಜೂನ್ 2020, 13:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕುಷ್ಟಗಿ: ಮೇಲಧಿಕಾರಿಗಳ ಸೂಚನೆಯನ್ನು ಕಡೆಗಣಿಸಿ ಪೂರೈಕೆದಾರರಿಗೆ ಮನಬಂದಂತೆ ಹಣ ಪಾವತಿಸುವ ಮೂಲಕ ನರೇಗಾ ಯೋಜನೆಗೆ ಸಂಬಂಧಿಸಿದ ಕೋಟ್ಯಂತರ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನ ನಾಲ್ಕು ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ.

ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಕೆ.ತಿಮ್ಮಪ್ಪ ಅವರು ನೀಡಿದ ದೂರಿನ ಅನ್ವಯ ಮುದೇನೂರು ಅಭಿವೃದ್ಧಿ ಅಧಿಕಾರಿ ವೆಂಕಟೇಶ್ ಪವಾರ ವಿರುದ್ಧ ತಾವರಗೇರಾ ಪೊಲೀಸ್ ಠಾಣೆಯಲ್ಲಿ, ತಳುವಗೇರಾ ಅಭಿವೃದ್ಧಿ ಅಧಿಕಾರಿ ಶಿವಪುತ್ರಪ್ಪ ಬರಿದೆಲಿ ವಿರುದ್ಧ ಕುಷ್ಟಗಿ ಠಾಣೆಯಲ್ಲಿ ಮತ್ತು ಹಿರೇಗೊಣ್ಣಾಗರ ಅಭಿವೃದ್ಧಿ ಅಧಿಕಾರಿ ಯಮನಪ್ಪ ರಾಮತ್ನಾಳ ಹಾಗೂ ಹಾಬಲಕಟ್ಟಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದಪ್ಪ ಕವಡಿಕಾಯಿ ವಿರುದ್ಧ ಹನುಮಸಾಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ.

‘ಕೆಲವೇ ಗಂಟೆಗಳಲ್ಲಿ ವೆಂಡರ್ಸ್ ಖಾತೆಗೆ ಹಣ ವರ್ಗಾವಣೆಯಾಗಿದೆ. ಪಾವತಿಯಾಗಿರುವ ಹಣವನ್ನು ಮರು ವಸೂಲಿ ಮಾಡಬೇಕೆ ಅಥವಾ ಇಲ್ಲವೆ ಎಂಬುದನ್ನು ಮೇಲಧಿಕಾರಿಗಳು ನಿರ್ಧರಿಸುತ್ತಾರೆ’ ಎಂದು ತಾಲ್ಲೂಕು ಪಂಚಾಯಿತಿ ಇಒ ಕೆ. ತಿಮ್ಮಪ್ಪ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.