ADVERTISEMENT

ಸಿಎಂಗೆ ಪತ್ರ ಬರೆದಿಟ್ಟು ದಿನಗೂಲಿ ನೌಕರ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2021, 1:47 IST
Last Updated 19 ಜನವರಿ 2021, 1:47 IST
   

ಗಂಗಾವತಿ: ಅರಣ್ಯ ಇಲಾಖೆಯಲ್ಲಿ 34 ವರ್ಷಗಳಿಂದ ದಿನಗೂಲಿಯಾಗಿ ಕೆಲಸ ಮಾಡುತ್ತಿದ್ದರೂ ಸೇವೆ ಕಾಯಂಗೊಳಿಸಿಲ್ಲ ಎಂದು ಮುಖ್ಯಮಂತ್ರಿಗೆ ಪತ್ರ ಬರೆದಿಟ್ಟು, ಪ್ರಾದೇಶಿಕ ವಲಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯ ಆವರಣದಲ್ಲಿ ದಿನಗೂಲಿ ನೌಕರಮಲ್ಲಿಕಾರ್ಜುನ (59) ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘ಅರಣ್ಯ ಇಲಾಖೆಯಲ್ಲಿ ಕ್ಷೇಮಾಭಿವೃದ್ಧಿ ಯೋಜನೆ ಅಡಿ ನೇಮಕವಾದ ನೌಕರರನ್ನು ಕಾಯಂ ಮಾಡಿಲ್ಲ. ಕೆಲವರು ಇದೇ ವರ್ಷ ನಿವೃತ್ತಿಯಾಗಲಿದ್ದಾರೆ. ನಾನೂಮೇ ತಿಂಗಳಿನಲ್ಲಿ ನಿವೃತ್ತಿಯಾಗಲಿದ್ದೇನೆ.ಭವಿಷ್ಯ ಕಷ್ಟವಾಗಲಿದೆ. ಹಾಗಾಗಿ ನೇಣಿಗೆ ಶರಣಾಗುತ್ತಿದ್ದೇನೆ. ಕೂಡಲೇ ನೌಕರರನ್ನು ಕಾಯಂ ಮಾಡಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿಟ್ಟಿದ್ದಾರೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಈ ಸಂಬಂಧ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.