ADVERTISEMENT

ಗಂಗಾವತಿ: ದತ್ತಾತ್ರೇಯ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2024, 15:26 IST
Last Updated 16 ಡಿಸೆಂಬರ್ 2024, 15:26 IST
ಗಂಗಾವತಿ ನಗರದ ಶಂಕರ ಮಠದಲ್ಲಿ ಸೋಮವಾರ ದತ್ತಾತ್ರೇಯ ಗುರುಗಳ ಜಯಂತಿ ಆಚರಣೆ ಮಾಡಲಾಯಿತು
ಗಂಗಾವತಿ ನಗರದ ಶಂಕರ ಮಠದಲ್ಲಿ ಸೋಮವಾರ ದತ್ತಾತ್ರೇಯ ಗುರುಗಳ ಜಯಂತಿ ಆಚರಣೆ ಮಾಡಲಾಯಿತು   

ಗಂಗಾವತಿ: ನಗರದ ಸಿದ್ದಿಕೇರಿ ರಸ್ತೆಯಲ್ಲಿನ ಶಂಕರ ಮಠದಲ್ಲಿ ತ್ರಿಮೂರ್ತಿ ಅವತಾರಿ ದತ್ತಾತ್ರೇಯ ಗುರುಗಳ ಜಯಂತ್ಯುತ್ಸವ ಸೋಮವಾರ ಆಚರಿಸಲಾಯಿತು.

ಜಯಂತಿ ನಿಮಿತ್ತ ದೇವಸ್ಥಾನದಲ್ಲಿ ದತ್ತಾತ್ರೇಯ ಪಾದುಕೆಗಳಿಗೆ ಪಂಚಾಮೃತ ಅಭಿಷೇಕ, ಅಷ್ಟೋತ್ತರ ಪಾರಾಯಣ, ವಿಶೇಷ ಅಲಂಕಾರ, ಮಹಾಮಂಗಳಾರತಿ ಸೇರಿದಂತೆ ನಾನಾ ಧಾರ್ಮಿಕ ಪೂಜೆಗಳನ್ನು ನಡೆಸಲಾಯಿತು. ನಂತರ ತೊಟ್ಟಿಲು ಸೇವೆ ಜೊತೆಗೆ ಪಲ್ಲಕ್ಕಿ ಮೆರವಣಿಗೆ ನಡೆಸಲಾಯಿತು.

ಶಂಕರ ಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ ಮಾತನಾಡಿ, ‘ಪ್ರತಿ ವರ್ಷದಂತೆ ಈ ಬಾರಿಯೂ ದತ್ತಾತ್ರೇಯ ಜಯಂತಿ ಆಚರಣೆ ಮಾಡಲಾಗುತ್ತಿದೆ. ಇದು 15ನೇ ವರ್ಷದ ಜಯಂತಿಯಾಗಿದೆ’ ಎಂದು ತಿಳಿಸಿದರು.

ADVERTISEMENT

ದೇವಸ್ಥಾನ ಪ್ರಧಾನ ಅರ್ಚಕ ಕುಮಾರ್ ಭಟ್, ಪ್ರಮುಖರಾದ ಮಹೇಶ ಭಟ್ ಜೋಷಿ, ರಾಘವೇಂದ್ರ ಅಳವಂಡಿಕರ್, ಬಾಲಕೃಷ್ಣ ದೇಸಾಯಿ, ಶ್ರೀಪಾದರಾವ್ ಮುಧೋಳಕರ್, ದತ್ತಾತ್ರೇಯ ಹೊಸಳ್ಳಿ, ವಿಶ್ವನಾಥ ಅಳವಂಡಿಕರ್, ಸುಧಾಕರ್ ಶೋಷಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.