ADVERTISEMENT

ನದಾಫ್-ಪಿಂಜಾರ್ ನಿಗಮ ಮಂಡಳಿ ರಚನೆಗೆ ಮನವಿ

ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2020, 2:28 IST
Last Updated 2 ಡಿಸೆಂಬರ್ 2020, 2:28 IST
ಕೊಪ್ಪಳದಲ್ಲಿ ಮಂಗಳವಾರ ನದಾಫ್‌, ಪಿಂಜಾರ್‌ ಸಂಘದ ಮುಖಂಡರು ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿಗೆ ಬರೆದ ಮನವಿಯನ್ನು ಹೆಚ್ಚುವರಿ ಜಿಲ್ಲಾಧಿಕಾರಿಗೆ ಸಲ್ಲಿಸಿದರು
ಕೊಪ್ಪಳದಲ್ಲಿ ಮಂಗಳವಾರ ನದಾಫ್‌, ಪಿಂಜಾರ್‌ ಸಂಘದ ಮುಖಂಡರು ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿಗೆ ಬರೆದ ಮನವಿಯನ್ನು ಹೆಚ್ಚುವರಿ ಜಿಲ್ಲಾಧಿಕಾರಿಗೆ ಸಲ್ಲಿಸಿದರು   

ಕೊಪ್ಪಳ: ನದಾಫ್, ಪಿಂಜಾರ್ ಸಮುದಾಯದ ಅಭಿವೃದ್ದಿಗಾಗಿ ನಿಗಮ ಮಂಡಳಿ ರಚನೆ ಮಾಡಬೇಕು ಎಂದು ಆಗ್ರಹಿಸಿಸಮಾಜದ ಮುಖಂಡರು ಮನವಿ ಸಲ್ಲಿಸಿದರು.

ರಾಜ್ಯದಲ್ಲಿ ವಾಸಿಸುವ ನದಾಫ್/ಪಿಂಜಾರ ಜನಾಂಗವು ಶೋಷಿತ ಹಾಗೂ ಕಡು ಬಡತನದ ನೆರಳಲ್ಲಿ ಕಷ್ಟಕರ ಜೀವನ ನಡೆಸುತ್ತಿರುವ ಅತಿ ಹಿಂದುಳಿದ ಜನಾಂಗವಾಗಿದ್ದೇವೆ. ಬಡತನದ ಸರಳತೆಯಲ್ಲಿಎಲ್ಲ ವರ್ಗದ ಜನತೆಯೊಂದಿಗೆ ಅರಿತು-ಬೆರೆತು ಜೀವನ ನೆಡೆಸುತ್ತಿರುವ ಈ ಜನಾಂಗ ಕೋಮು ಸೌಹಾರ್ದದಸಂಕೇತವಾಗಿದೆ ಎಂದು ಮುಖಂಡರು ಹೇಳಿದರು.

'ನಮ್ಮ ಜನಾಂಗ ನಗರ ಹಾಗೂ ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದು ನಮ್ಮ ಮೂಲ ವೃತ್ತಿ ಗಾದಿ, ಹಗ್ಗ, ಕಣಿ ತಯಾರಿಕೆ ಮಾಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಹೊಸ, ಹೊಸ ತಾಂತ್ರಿಕತೆಯಿಂದ ನಮ್ಮ ವಸ್ತುಗಳಿಗೆ ಬೇಡಿಕೆ ಇಲ್ಲದಂತಾಗಿ ಕಸಬು ಸಂಪೂರ್ಣ ನಿಂತು ಹೋಗಿದೆ. ಹೀಗಾಗಿ ದುಡಿಮೆಗಾಗಿ ಗೌಂಡಿ, ಕೂಲಿ ಕೆಲಸ, ಬೀದಿಗಳಲ್ಲಿಹಣ್ಣು, ತರಕಾರಿ ವ್ಯಾಪಾರ, ವಾಹನ ದುರಸ್ತಿಯಂತಹ ಸಣ್ಣ ಪುಟ್ಟ ಕೆಲಸದಲ್ಲಿಯೇ ತೊಡಗಿದ್ದೇವೆ' ಎಂದು ಮನವಿಯಲ್ಲಿ ವಿವರಿಸಿದ್ದಾರೆ.

ADVERTISEMENT

ನಮ್ಮ ಸಮಾಜ ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದೆ. ರಾಜ್ಯದಲ್ಲಿ ಸುಮಾರು 25 ರಿಂದ 30 ಲಕ್ಷಜನಸಂಖ್ಯೆ ಇದ್ದು ಇದರಲ್ಲಿ ಶೇ90 ಕ್ಕೂ ಅಧಿಕ ಬಡವರಿದ್ದು, ಮಕ್ಕಳಿಗೆ ಶಿಕ್ಷಣ ಕೊಡಿಸುವ ಆರ್ಥಿಕ ಶಕ್ತಿ ಇಲ್ಲದೆ ಇಂದಿನ ಸ್ಪರ್ಧಾತ್ಮಕಜಗತ್ತಿನಲ್ಲಿ ಹೋರಾಟ ನಡೆಸುವ ಶಕ್ತಿ ಇಲ್ಲವಾಗಿದೆ.ಈಗಾಗಲೇಎರಡು ಸಾರಿ ಮುಖ್ಯಮಂತ್ರಿಗಳನ್ನು ನೇರವಾಗಿ ಭೇಟಿಮಾಡಿ ನಮ್ಮ ಅಹವಾಲು ಸಲ್ಲಿಸಿದ್ದೇವೆ ಎಂದು ಮುಖಂಡರು ವಿವರಿಸಿದರು.

ಸಮಾಜದ ಮುಖಂಡರಾದಶಹಾಬುದ್ದೀನ್‌ಸಾಬ್‌ನೂರಭಾಷಾ,ಜಿಲ್ಲಾ ಘಟಕದ ಅಧ್ಯಕ್ಷಕಾಶೀಂ ಅಲಿ ಮುದ್ದಾಬಳ್ಳಿ, ಅಲ್ಲಾಸಾಬ್ ಗೊಂದಿಹೊಸಳ್ಳಿ, ಹೊನ್ನೂರಸಾಬ್‌ ಭೈರಾಪುರ, ಯಾಸೀನಸಾಬ್ ಗಂಗಾವತಿ, ಜಾಕೀರ್ ಹುಸೇನ್ ತಳಕಲ್, ಸಲೀಂಸಾಬ್‌ ಭಾಗ್ಯನಗರ, ಕಾಶೀಂಸಾಬ್‌ ಸಂಕನೂರ,ಷೇಕ್‌ಷಾವಲಿ ಗಂಗಾವತಿ, ಮಾಬುಸಾಬ ಬಿಕನಳ್ಳಿ, ಮುಸ್ತಫಾ ಕುದರಿಮೋತಿಇದ್ದರು.

ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಹೆಚ್ಚುವರಿ ಜಿಲ್ಲಾಧಿಕಾರಿಗೆ ಸಲ್ಲಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.