ADVERTISEMENT

ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪರಿಹಾರಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 7:21 IST
Last Updated 9 ಸೆಪ್ಟೆಂಬರ್ 2025, 7:21 IST
ಯಲಬುರ್ಗಾ ತಾಲ್ಲೂಕಿನ ಹಿರೇವಡ್ರಕಲ್ಲ ಗ್ರಾಮದ ಪಾರ್ವತಿ ಮನೆಗೆ ಮುಖಂಡರು ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು 
ಯಲಬುರ್ಗಾ ತಾಲ್ಲೂಕಿನ ಹಿರೇವಡ್ರಕಲ್ಲ ಗ್ರಾಮದ ಪಾರ್ವತಿ ಮನೆಗೆ ಮುಖಂಡರು ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು    

ಯಲಬುರ್ಗಾ: ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದ ತಾಲ್ಲೂಕಿನ ಹಿರೇವಡ್ರಕಲ್ಲ ಗ್ರಾಮದ ಪಾರ್ವತಿ ಅವರ ಮನೆಗೆ ಜಿಲ್ಲೆಯ ವಿವಿಧ ಸಂಘಟನೆ ಹಾಗೂ ರಾಜಕೀಯ ಮುಖಂಡರು ಭೇಟಿ ನೀಡಿ ಸಾಂತ್ವನ ಹೇಳಿ ಪರಿಹಾರಕ್ಕಾಗಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

‘ಆತ್ಮಹತ್ಯೆಗೆ ಶರಣಾಗಿದ್ದ ಪಾರ್ವತಿಯ ಪತಿ ಮತ್ತು ಅವರ ತಾಯಿಯಿಂದ ಸಮಗ್ರ ಮಾಹಿತಿ ಪಡೆದು ಆರೋಪಿಗಳನ್ನು ಶಿಕ್ಷೆಗೆ ಒಳಪಡಿಸಬೇಕು. ಅಲ್ಲದೇ ನಿರ್ಲಕ್ಷ್ಯ ವಹಿಸಿದ್ದ ಬೇವೂರು ಠಾಣೆಯ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಸಂತ್ರಸ್ತ ಕುಟುಂಬಕ್ಕೆ ಅರ್ಥಿಕ ನೆರವು ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.

ಮುಖಂಡರಾದ ಪರುಶುರಾಮ ಅಮರಾವತಿ ಕುಷ್ಟಗಿ, ರಾಮಣ್ಣ ಅಳವಂಡಿ, ಯಲ್ಲಪ್ಪ ನಿಲೋಗಲ್ ಮಾನ್ವಿ, ರಾಮು ಪೂಜಾರಿ ಕೊಪ್ಪಳ, ಯಮನೂರಪ್ಪ ಕರಮುಡಿ, ದುರುಗಪ್ಪ ಕರಮುಡಿ ಯಲಬುರ್ಗಾ, ಗಣೇಶ್ ಮುಧೋಳ, ಕಾರಟಗಿಯ ಪಂಪಾಪತಿ ಬಿ.ಸೋಮನಾಳ, ಹುಲ್ಲೇಶ್ ಬಂಡಿವಡ್ಡರ್ ಗಂಗಾವತಿ, ರಮೇಶ್ ಡಗ್ಗಿ, ದುರ್ಗೇಶ್ ಸಿದ್ದಾಪೂರ, ನಾಗರಾಜ್ ಸಿದ್ದಾಪೂರ, ಹನ್ಮೇಶ್ ಸಿದ್ದಾಪೂರ, ರಾಘವೇಂದ್ರ ಸಿದ್ದಾಪೂರ, ಬಸವರಾಜ್ ಮುಧೋಳ, ಹನುಮಂತ ಕುಷ್ಟಗಿ, ಗಿರೀಶ್ ಪೂಜಾರಿ, ಭೀಮೇಶ ಮಾದಿನೂರ, ಲಕ್ಷ್ಮಣ ತಾವರಗೆರೆ, ಯಮನೂರಪ್ಪ ಹಾಲವರ್ತಿ, ಶರಣಪ್ಪ ಭೋವಿ, ಯಮನೂರಪ್ಪ ವೀರಾಪೂರ ಸೇರಿ ಅನೇಕರು ಇದ್ದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.