ಕನಕಗಿರಿ: ಹಿಂದುಳಿದ ಸಮುದಾಯಕ್ಕೆ ಸೇರಿದ ಯಾದವ, ಗೊಲ್ಲ ಸಮಾಜದ ಏಕೈಕ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ತಾಲ್ಲೂಕಿನ ಶ್ರೀಕೃಷ್ಣ ಗೊಲ್ಲ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಗುರುವಾರ ಮನವಿ ಪತ್ರ ಸಲ್ಲಿಸಿದರು.
ಸಂಘದ ಅಧ್ಯಕ್ಷ ನಿರುಪಾದಿ ಗೊಲ್ಲರ ಮಾತನಾಡಿ, ‘ಶಾಸಕಿ ಪೂರ್ಣಿಮಾ ಅವರು ಹಿಂದುಳಿದ ಗೊಲ್ಲ ಸಮಾಜದಿಂದ ಆಯ್ಕೆಯಾಗಿದ್ದಾರೆ. ಉತ್ತಮ ಸಂಘಟನಾ ಶಕ್ತಿ ಹೊಂದಿದ್ದು ರಾಜ್ಯದ ವಿವಿಧ ಲೋಕಸಭೆ, ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.
ಸಚಿವ ಸಂಪುಟದಲ್ಲಿ ಉಳಿದಿರುವ ಬಾಕಿ ಸ್ಥಾನಗಳಲ್ಲಿ ಯಾದವ ಸಮಾಜದವರಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಹಿರೇ ಹನುಮಂತಪ್ಪ, ಪ್ರಮುಖರಾದ ಕನಕದಾಸ ಯಾದವ, ಕೃಷ್ಣಮೂರ್ತಿ ದಾಸರ, ವೆಂಕಣ್ಣ ಸೂಜಿ, ಕರೆಡೆಪ್ಪ ಚಿಂಚಲಿ, ವೆಂಕಟೇಶ ಬಂಡ್ಲಿ, ಕನಕಪ್ಪ ಗುಡದೂರ, ಹನುಮೇಶ ದಾಸರ ಹಾಗೂ ನಾಗೇಶ ಬಂಕಾಪುರ ಇದ್ದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಧನಂಜಯ ಮಾಲಗಿತ್ತಿ ಅವರ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.