ADVERTISEMENT

ಕೊಪ್ಪಳ: ವಿವಿಧೆಡೆ ಆದ್ಯ ವಚನಕಾರರ ಸ್ಮರಣೆ

ಕೋವಿಡ್‌ ಕಾರಣ ಸರಳ ಜಯಂತಿ: ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2021, 4:07 IST
Last Updated 18 ಏಪ್ರಿಲ್ 2021, 4:07 IST
ಕುಕನೂರಿನ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ದೇವರ ದಾಸಿಮಯ್ಯ ಜಯಂತಿ ಆಚರಿಸಲಾಯಿತು
ಕುಕನೂರಿನ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ದೇವರ ದಾಸಿಮಯ್ಯ ಜಯಂತಿ ಆಚರಿಸಲಾಯಿತು   

ಕೊಪ್ಪಳ: ದೇವರ ದಾಸಿಮಯ್ಯನವರ ಜಯಂತಿ ಪ್ರಯುಕ್ತ ಜಿಲ್ಲಾಡಳಿತದ ವತಿಯಿಂದ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸರಳವಾಗಿ ಜಯಂತಿ ಆಚರಿಸಲಾಯಿತು.

ಹೆಚ್ಚುವರಿಜಿಲ್ಲಾಧಿಕಾರಿ ಎಂ.ಪಿ.ಮಾರುತಿ ಅವರು ದೇವರ ದಾಸಿಮಯ್ಯರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.

ADVERTISEMENT

ಸಮಾಜದ ಮುಖಂಡರಾದ ಲಕ್ಷ್ಮಣ ಚಳಮರದ, ಪ್ರಹ್ಲಾದ್ ಅಗಳಿ ಸಿಬ್ಬಂದಿ ಮತ್ತು ವಿವಿಧಇಲಾಖೆ ಹಾಗೂ ಅಧಿಕಾರಿಗಳುಇದ್ದರು.

‘ಭಕ್ತಿ ಮಾರ್ಗದಲ್ಲಿ ನಡೆದಿದ್ದ ದಾಸಿಮಯ್ಯ’

ಮಂಡಲಗಿರಿ (ಕುಕನೂರು): ‘ಸೀರೆ ನೇಯುತ್ತ ಸಂಸಾರ ಸಾಗಿಸುತ್ತ, ಭಕ್ತಿ ಮಾರ್ಗವೇ ಉನ್ನತ ಎಂದು ಅರಿವು ಮೂಡಿಸಿದ ವಚನಕಾರ ದಾಸಿಮಯ್ಯ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಶಪ್ಪ ದೊಡ್ಡಮನಿ ಹೇಳಿದರು.

ತಾಲ್ಲೂಕಿನ ಮಂಡಲಗಿರಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಶನಿವಾರ ನಡೆದ ವಚನಕಾರ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದಾಸಿಮಯ್ಯ ಶಿವನಿಗೇ ಬಟ್ಟೆ ಕೊಟ್ಟು ಭಕ್ತಿ ಮೆರದಿದ್ದಕ್ಕೆ ಪುರಾಣಗಳಲ್ಲಿ ಉಲ್ಲೇಖಗಳು ಸಿಗುತ್ತವೆ. ರಾಮನಾಥ ಎಂಬ ಅಂಕಿತದಲ್ಲಿ ಬರೆಯಲಾದ ಸುಮಾರು 150 ವಚನಗಳು ದೊರೆತಿವೆಯೆನ್ನಲಾಗಿದೆ. ದೇವಾಂಗ ಸಮುದಾಯದಲ್ಲಿ ಮೊಟ್ಟ ಮೊದಲು ಪ್ರಸಿದ್ಧರಾದವರು ದೇವರ ದಾಸಿಮಯ್ಯ ಎಂದರು.

ಉಪಯುಕ್ತ ಮತ್ತು ದಿನ ನಿತ್ಯದ ಜೀವನಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ವಚನಗಳನ್ನು ರಚಿಸುತ್ತಿದ್ದರು. ಅನೇಕ ಪವಾಡಗಳನ್ನು ಮಾಡಿದ ಅವರು, ಮನುಷ್ಯ ಜೀವನದಲ್ಲಿ ದೇವರ ಸ್ಮರಣೆ ಹಾಗೂ ಜೀವನ ಸಾಧನೆ ಪ್ರಮುಖ ಎಂದು ನಂಬಿ ಬಹಳ ಹೆಸರುವಾಸಿ ಆಗಿದ್ದರು. ಇಂತಹ ವ್ಯಕ್ತಿ ಜಯಂತಿಯನ್ನು ಆಚರಣೆ ಮಾಡುತ್ತಿರುವುದು ಸಂತಸದ ಸಂಗತಿ ಎಂದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪರುಶರಾಮ್ ನಾಯ್ಕ್ ಮಾತನಾಡಿ,‘ಕೋವಿಡ್‌- 19 ಎರಡನೇ ಅಲೆ ಹೆಚ್ಚಾಗುತ್ತಿದ್ದು, ಅದನ್ನು ನಿಯಂತ್ರಿಸಬೇಕಾಗಿದೆ. ಆದ್ದರಿಂದ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ ಅಂತರ ಕಾಪಾಡಿಕೊಳ್ಳಬೇಕು’ ಎಂದು ಹೇಳಿದರು.

ಉಪಾಧ್ಯಕ್ಷೆ ಲಕ್ಷ್ಮವ್ವ ಭಾವಿಕಟ್ಟೆ, ಸಂಜುಕುಮಾರ್ ಗೊಲ್ಲರ್, ಬಸಮ್ಮ ಸಿಸಿಮಠ, ವೀರಣ್ಣ ಅಳವಂಡಿ, ದೇವಕ್ಕ ಈಳಿಗೇರಾ, ದೇವೇಂದ್ರಪ್ಪ ದಳವಾಯಿ, ನಿಂಗಮ್ಮ ದ್ಯಾಮನಗೌಡ್ರ, ಲಕ್ಷ್ಮವ್ವ ಚಲವಾದಿ ಹಾಗೂ ಬಸವರಾಜ್ ಹಳ್ಳಿಕೇರಿ ಇದ್ದರು.

ಕುಕನೂರಿನ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ದೇವರ ದಾಸಿಮಯ್ಯ ಜಯಂತಿ ಆಚರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.