ADVERTISEMENT

101ಕೆ.ಜಿ ಜೋಳದ ಚೀಲಹೊತ್ತು ಅಂಜನಾದ್ರಿ ಬೆಟ್ಟ ಏರಿದ ಭಕ್ತ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 6:17 IST
Last Updated 5 ನವೆಂಬರ್ 2025, 6:17 IST
101 ಕೆ.ಜಿ ತೂಕದ ಚೀಲ ಹೊತ್ತು ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟ ಏರಿದ ನವೀನ್
101 ಕೆ.ಜಿ ತೂಕದ ಚೀಲ ಹೊತ್ತು ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟ ಏರಿದ ನವೀನ್   

ಗಂಗಾವತಿ: ತಾಲ್ಲೂಕಿನ ಅಂಜನಾದ್ರಿ ಬೆಟ್ಟವನ್ನು ಬಾಗಲಕೋಟೆ ಜಿಲ್ಲೆಯ ಹನುಗುಂದ ತಾಲ್ಲೂಕಿನ ಕೂಡಲಸಂಗಮದ ಬಳಿಯ ಬಿಸಿಲುದಿನ್ನಿ ಗ್ರಾಮದ 19 ವರ್ಷದ ನವೀನ್ ಭರಮಗೌಡ ಮಂಗಳವಾರ 101 ಕೆಜಿ ಭಾರದ ಜೋಳದ ಚೀಲ ಹೊತ್ತು ಏರಿದ್ದಾರೆ. 

ಬೆಟ್ಟದ ಆರಂಭದಿಂದ ಹೊತ್ತು ಚೀಲವನ್ನು ಎಲ್ಲಿಯೂ ಇಳಿಸದೆ ರಾಮ, ಹನುಮನನ್ನು ನೆನೆಯುತ್ತಾ ಅವರ ಹೆಸರಿನಲ್ಲಿ ಘೋಷಣೆ  ಬೆಟ್ಟ ಏರಿದರು. ಬಳಿಕ ಜೋಳದ ಚೀಲವನ್ನು ದೇವರಿಗೆ ಸಮರ್ಪಿಸಿ ದರ್ಶನ ಪಡೆದರು.

‘ನಾನು ಗ್ರಾಮೀಣ ಪ್ರ ದೇಶದವನಾಗಿದ್ದು ಸಂಗ್ರಾಣಿ ಕಲ್ಲು, ಮುಂಗೈ ಭಾರ ಎತ್ತುವ, ಮೊಣಕಾಲಿನಲ್ಲಿ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸುತ್ತೇನೆ. ಈಚೆಗೆ ಕೂಡಲಸಂಗಮದಲ್ಲಿ ನಡೆದ ಭಾರ ಎತ್ತುವ ಸ್ಪರ್ಧೆಯಲ್ಲಿ ವಿಜೇತನಾದರೇ ಅಂಜನಾದ್ರಿ ಬೆಟ್ಟಕ್ಕೆ ಬರುವುದಾಗಿ ಹರಕೆ ಹೊತ್ತಿದ್ದೆ’ ಎಂದರು.

ADVERTISEMENT

ನವೀನ್ ಸ್ನೇಹಿತರಾದ ಸಾಗರ, ಮಂಜಪ್ಪ, ವಿಜಯ್, ಸಂಗಪ್ಪ, ವಿಠ್ಠಲ್, ಉಮೇಶ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.