ADVERTISEMENT

ಕೊಪ್ಪಳ: ಕಿಟ್ ಪಡೆಯಲು ಅವಸರ ಬೇಡ -ನಗರಸಭೆ ಅಧ್ಯಕ್ಷ ಲತಾ ಚಿನ್ನೂರು

ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2021, 6:23 IST
Last Updated 15 ಜುಲೈ 2021, 6:23 IST
ಕೊಪ್ಪಳದ ಬಹಾರ್‌ ಪೇಟೆ ಶಾಲೆಯಲ್ಲಿ ಕಟ್ಟಡ ಕಾರ್ಮಿಕರಿಗೆ ಕಿಟ್‌ಗಳನ್ನು ನಗರಸಭೆ ಅಧ್ಯಕ್ಷೆ ಲತಾ ಗವಿಸಿದ್ಧಪ್ಪ ಚಿನ್ನೂರು ವಿತರಿಸಿದರು. ಎಸ್‌.ಎ.ಗಫಾರ್, ರಮೇಶ ಚಿಕೇನಕೊಪ್ಪ, ಆದಿಲ್ ಪಟೇಲ್ ಇದ್ದರು
ಕೊಪ್ಪಳದ ಬಹಾರ್‌ ಪೇಟೆ ಶಾಲೆಯಲ್ಲಿ ಕಟ್ಟಡ ಕಾರ್ಮಿಕರಿಗೆ ಕಿಟ್‌ಗಳನ್ನು ನಗರಸಭೆ ಅಧ್ಯಕ್ಷೆ ಲತಾ ಗವಿಸಿದ್ಧಪ್ಪ ಚಿನ್ನೂರು ವಿತರಿಸಿದರು. ಎಸ್‌.ಎ.ಗಫಾರ್, ರಮೇಶ ಚಿಕೇನಕೊಪ್ಪ, ಆದಿಲ್ ಪಟೇಲ್ ಇದ್ದರು   

ಕೊಪ್ಪಳ: ಎಲ್ಲ ಕಟ್ಟಡ ಕಾರ್ಮಿಕರಿಗೆ ಕಿಟ್‌ ನೀಡಲಾಗುತ್ತಿದೆ. ಆದರೆ ಕೋವಿಡ್‌ ಮಾರ್ಗಸೂಚಿ ಉಲ್ಲಂಘಿಸಿ, ಪರಸ್ಪರ ಅಂತರ ಕಾಪಾಡಿಕೊಂಡು ಕಿಟ್‌ಗಳನ್ನು ಪಡೆಯಬೇಕು. ನೀವು ಆರೋಗ್ಯವಾಗಿದ್ದರೆ ಮಾತ್ರ ಕುಟುಂಬಗಳು ಆರೋಗ್ಯವಾಗಿರಲು ಸಾಧ್ಯ ಎಂದು ನಗರಸಭೆ ಅಧ್ಯಕ್ಷ ಲತಾ ಚಿನ್ನೂರು ಹೇಳಿದರು.

ಅವರು ನಗರದನಗರ ಪೊಲೀಸ್ ಠಾಣೆ ಹತ್ತಿರದಬಹಾರ್ ಪೇಟೆ ಶಾಲೆ ಆವರಣದಲ್ಲಿ ಜಿಲ್ಲಾ ಕಾರ್ಮಿಕ ಇಲಾಖೆ ಹಾಗೂ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಘಟಕದ ಆಶ್ರಯದಲ್ಲಿ ಕೋವಿಡ್ 19 ಎರಡನೇ ಅಲೆಯ ಲಾಕ್ ಡೌನ್ ಜಾರಿಯಲ್ಲಿ ಆರ್ಥಿಕ ಸಂಕಷ್ಟಕ್ಕೀಡಾದ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಿಮಾತನಾಡಿದರು.

ಜಿಲ್ಲಾ ಕಾರ್ಮಿಕ ಅಧಿಕಾರಿ ವೀಣಾ ಮಾಸ್ತಿ ಮಾತನಾಡಿ, ಆರ್ಥಿಕ ಸಂಕಷ್ಟಕ್ಕೀಡಾದ ಕಟ್ಟಡ ಕಾರ್ಮಿಕರ ಬ್ಯಾಂಕ್ ಖಾತೆಗೆ ನೇರವಾಗಿ ₹ 3ಸಾವಿರ ಜಮಾ ಮಾಡಲಾಗುತ್ತಿದೆ ಎಂದು ಹೇಳಿದರು.

ADVERTISEMENT

ಸಂಘದ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್ ಮಾತನಾಡಿದರು. ನಗರದ ಬಹಾರ ಪೇಟೆ ಶಾಲಾ ಆವರಣದಲ್ಲಿ ಕಟ್ಟಡ ಕಾರ್ಮಿಕರ ಸಂಘದ ಸದಸ್ಯರು ಸೇರಿದಂತೆ 18,19,20ನೇ ವಾರ್ಡಿನ ಹಟಗಾರ ಪೇಟೆ, ತೆಗ್ಗಿನಕೇರಾ, ಹುಸೇನಿ ಮೊಹಲ್ಲಾ, ಬಹಾರ ಪೇಟೆ, ಕುರುಬರ ಓಣಿ, ಅಮಿನಪುರ ಮುಂತಾದ ಸುತ್ತಲಿನ ಓಣಿಗಳ ಒಟ್ಟು500 ಕಟ್ಟಡ ಕಾರ್ಮಿಕರಿಗೆ ಅಹಾರ ಸಾಮಗ್ರಿಗಳ ಕಿಟ್ವಿತರಿಸಲಾಯಿತು.

ನಗರಸಭೆ ಮಾಜಿ ಸದಸ್ಯ ಗವಿಸಿದ್ದಪ್ಪ ಚಿನ್ನೂರ್. ಜೆಡಿಎಸ್ ಮುಖಂಡ ಸೈಯ್ಯದ್ ಮೊಹಮ್ಮದ್ ಹುಸೇನಿ. ವೆಲ್ಫೇರ್ ಪಾರ್ಟಿಯ ಜಿಲ್ಲಾ ಘಟಕದ ಅಧ್ಯಕ್ಷ ಆದಿಲ್ ಪಟೇಲ್. ಕಾರ್ಮಿಕ ಮುಖಂಡರಾದ ಮೌಲಾ ಹುಸೇನ ಹಣಗಿ. ಮರ್ದಾನ್ ಗುದಿ. ಪೇಂಟರ್ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ್ ಮಂಡ್ಯ ಮುಂತಾದವರು ಇದ್ದರು. ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ್. ಪಿ. ಚಿಕೇನಕೊಪ್ಪಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.