ಕುಕನೂರು: ಸಮೃದ್ಧ ಮಳೆ ಹಾಗೂ ಬೆಳೆಗಾಗಿ ಪ್ರಾರ್ಥಿಸಿ ಇಲ್ಲಿನ ಕೋಳಿಪೇಟೆಯ ಗ್ರಾಮದೇವತೆ ದುರ್ಗಮ್ಮ ದೇವಿಗೆ ಉಡಿತುಂಬುವ ಕಾರ್ಯಕ್ರಮ ಮಂಗಳವಾರ ನಡೆಯಿತು.
‘ಗ್ರಾಮದಲ್ಲಿ ಗ್ರಾಮಸ್ಥರು ಐದು ವಾರಗಳಿಂದ ಭಕ್ತಿ ಭಾವದಿಂದ ತಾಯಿಯ ಉಡಿತುಂಬುವ ಕಾರ್ಯ ನೆರವೇರಿಸಿದ್ದಾರೆ. ಸಂಪ್ರದಾಯದಂತೆ ಈ ವೇಳೆ ರೈತರು ಯಾವುದೇ ಕೆಲಸಗಳನ್ನು ಮಾಡುವುದಿಲ್ಲ. ಎತ್ತುಗಳಿಂದ ಉಳುಮೆಯನ್ನು ಮಾಡುವುದಿಲ್ಲ. ಮನೆಯಲ್ಲಿ ರೊಟ್ಟಿ ಸಹ ಮಾಡದೇ ಉಡಿ ತುಂಬುವ ಕಾರ್ಯ ನೆರವೇರಿಸಿರುವುದು ವೈಶಿಷ್ಟವಾಗಿದೆ’ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಗಗನ ನೋಟಗಾರ ಹೇಳಿದರು.
ಮುಖಂಡ ವೀರೇಶ ಸಬರದ,ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.