ADVERTISEMENT

ಕೊಪ್ಪಳ: ಸರ್ವೋದಯ ಮಂಡಳದ ಜಿಲ್ಲಾ ಘಟಕದ ಪದಾಧಿಕಾರಿಗಳ ಅಯ್ಕೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2024, 14:08 IST
Last Updated 30 ಜುಲೈ 2024, 14:08 IST
ಕರ್ನಾಟಕ ಸರ್ವೋದಯ ಮಂಡಳದ ರಾಜ್ಯ ಕಾರ್ಯದರ್ಶಿ ವೈ.ಸಿ. ದೊಡ್ಡಯ್ಯ ಅವರನ್ನು ಕೊಪ್ಪಳ ಜಿಲ್ಲಾ ಘಟಕದಿಂದ ಸನ್ಮಾನಿಸಲಾಯಿತು
ಕರ್ನಾಟಕ ಸರ್ವೋದಯ ಮಂಡಳದ ರಾಜ್ಯ ಕಾರ್ಯದರ್ಶಿ ವೈ.ಸಿ. ದೊಡ್ಡಯ್ಯ ಅವರನ್ನು ಕೊಪ್ಪಳ ಜಿಲ್ಲಾ ಘಟಕದಿಂದ ಸನ್ಮಾನಿಸಲಾಯಿತು   

ಕೊಪ್ಪಳ: ನಗರದ ಪ್ರವಾಸಿ ಮಂದಿರದಲ್ಲಿ ಗಾಂಧೀಜಿ ಚಿಂತನೆಗಳ ಹೊತ್ತ ಅಖಿಲ ಭಾರತ ಸರ್ವೋದಯ ಮಂಡಳದ ಕರ್ನಾಟಕ ಸರ್ವೋದಯ ಮಂಡಳದ ಜಿಲ್ಲಾ ಘಟಕದ ಪದಾಧಿಕಾರಿಗಳ ಸಭೆ ಜರುಗಿತು. ಈ ವೇಳೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಜಿಲ್ಲಾ ಘಟಕದ ಗೌರವ ಅಧ್ಯಕ್ಷರಾಗಿ ಕೆ.ಬಿ.ಬ್ಯಾಳಿ, ಅಧ್ಯಕ್ಷರಾಗಿ ಪ್ರೊ ಬಿ.ಸಿ. ಐಗೋಳ, ಉಪಾಧ್ಯಕ್ಷರಾಗಿ ವೀರಣ್ಣ ನಿಂಗೋಜಿ, ಬಸವರಾಜ ಅಯೋಧ್ಯ, ಸಂಚಾಲಕರಾಗಿ ಶರಣಬಸಪ್ಪ ಕೋಲ್ಕಾರ, ಕೋಶಾಧ್ಯಕ್ಷರಾಗಿ ಸೋಮಪ್ಪ ಯಲಬುರ್ಗಾ, ಕಾರ್ಯದರ್ಶಿಯಾಗಿ ಸಿದ್ಧಲಿಂಗಪ್ಪ ಕೊಟ್ನೇಕಲ್, ಮಾಧ್ಯಮ ಪ್ರತಿನಿಧಿಗಳಾಗಿ ನಾಗರಾಜನಾಯಕ ಡೊಳ್ಳಿನ, ಪಂಪಾರೆಡ್ಡಿ ಅರಳಿಹಳ್ಳಿ, ತಾಲ್ಲೂಕುವಾರು ಸಹಕಾರ್ಯದರ್ಶಿಗಳಾಗಿ ರಾಮಣ್ಣ ಶ್ಯಾವಿ (ಕೊಪ್ಪಳ), ನಟರಾಜ್ ಸೋನಾರ್ (ಕುಷ್ಟಗಿ), ಮಧುಸೂಧನ (ಕನಕಗಿರಿ), ಮೇಘರಾಜ (ಕುಕನೂರು), ಹನುಮಂತಪ್ಪ ಕುರಿ (ಯಲಬುರ್ಗಾ) ಶರಣೇಗೌಡ ಪಾಟೀಲ (ಕಾರಟಗಿ), ನಾಗರತ್ನ (ಗಂಗಾವತಿ) ನೇಮಕ ಮಾಡಲಾಯಿತು.

ಸದಸ್ಯರನ್ನಾಗಿ ಪ್ರಾಣೇಶ ಪೂಜಾರ, ಬಸವರಾಜ ಸವಡಿ, ಆನಂದತೀರ್ಥ ಪ್ಯಾಟಿ, ಪ್ರಕಾಶಗೌಡ ಎಸ್.ಯು, ದುರ್ಗಾದಾಸ ಯಾದವ, ಮಹಾಬಳೇಶ್ವರ ಸಜ್ಜನ, ಕೆ.ಶರಣಪ್ಪ ನಿಡಶೇಸಿ, ಜೀವನಸಾಬ್ ಬಿನ್ನಾಳ, ಹನುಮಂತಪ್ಪ ಕುರಿ, ಹೇಮಂತಪ್ಪ ಬಡಿಗೇರ, ದಯಾನಂದ ಸಾಗರ ಪಾಟೀಲ ಆಯ್ಕೆ ಮಾಡಲಾಯಿತು.

ADVERTISEMENT

ಮಂಡಳದ ಉದ್ದೇಶಗಳು, ಮಾಡಬೇಕಾದ ಕಾರ್ಯಕ್ರಮ, ಮತ್ತು ಸದಸ್ಯತ್ವದ ಕುರಿತು ಚರ್ಚಿಸಲಾಯಿತು. ಮಹಾತ್ಮ ಗಾಂಧೀಜಿಯವರ ಆದರ್ಶ, ಸರಳತೆ, ವಿಚಾರಧಾರೆಗಳನ್ನು ತಿಳಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು. ನಾಗರಾಜನಾಯಕ ಡೊಳ್ಳಿನ ವಂದಿಸಿದರು. ಮಂಡಳದ ರಾಜ್ಯಘಟಕದ ಕಾರ್ಯದರ್ಶಿ ವೈ. ಸಿ. ದೊಡ್ಡಯ್ಯನವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.