
ಗಂಗಾವತಿ: ಉದ್ಯೋಗ ಖಾತರಿ ಯೋಜನೆಯ ಸ್ವರೂಪ ಬದಲು ಮತ್ತು ಮಹಾತ್ಮ ಗಾಂಧಿ ಹೆಸರು ಕೈಬಿಟ್ಟಿರುವುದನ್ನು ಖಂಡಿಸಿ ಕರ್ನಾಟಕ ಪ್ರಾಂತ ರೈತ ಸಂಘಟನೆಯ ಕಾರ್ಯಕರ್ತರು ತಾಲ್ಲೂಕಿನ ವೆಂಕಟಗಿರಿ ಗ್ರಾ.ಪಂ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಸಂಘಟನೆಯ ಮುಖಂಡ ಶ್ರೀನಿವಾಸ, ‘ಗ್ರಾಮೀಣ ಭಾಗದ ಜನರಿಗೆ ಸಾಕಷ್ಟು ಅನುಕೂಲವಾದ ಉದ್ಯೋಗ ಖಾತ್ರಿ ಯೋಜನೆಯ ಸ್ವರೂಪ ಮಾಡಿದ್ದರ ಹಿಂದೆ ಯೋಜನೆಯನ್ನು ದುರ್ಬಲಗೊಳಿಸುವ ಹುನ್ನಾರ ಮಾಡುತ್ತಿದೆ. ರಾಜಕೀಯ ಉದ್ದೇಶಕ್ಕೆ ಗಾಂದೀಜಿ ಹೆಸರು ಕೈ ಬಿಟ್ಟಿದ್ದಾರೆ. ಕೇಂದ್ರ ಸರ್ಕಾರ ಶೇ90ರಷ್ಟು ರಾಜ್ಯ ಸರ್ಕಾರ ಶೇ10ರ ಅನುಪಾತದಲ್ಲಿ ಕೂಲಿ ಹಣ ನೀಡುತ್ತಿತ್ತು. ಹೊಸ ಕಾಯ್ದೆ ಅನ್ವಯ 60:40ರ ಅನುಪಾತದಲ್ಲಿ ಭರಿಸಬೇಕಾಗಿದೆ. ಕೂಲಿಯನ್ನೂ ₹370ರಿಂದ ₹240ಕ್ಕೆ ಇಳಿಕೆ ಮಾಡಲಾಗುತ್ತಿದೆ. ಇದು ಕಾರ್ಮಿಕರನ್ನು ವಂಚಿಸುವ ಕೆಲಸವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಕೂಡಲೇ ಕೇಂದ್ರ ಸರ್ಕಾರ ಮಾಡಿದ ಹಳೆ ಮಾದರಿಯಲ್ಲೇ ನರೇಗಾ ಯೋಜನೆ ಮುಂದುವರಿಸಬೇಕು ಎಂದು ಒತ್ತಾಯಿಸಿ ಪಿಡಿಒ ಅವರಿಗೆ ಮನವಿ ಸಲ್ಲಿಸಿದರು.
ಸಂಘಟನೆ ಪ್ರಮುಖರಾದ ಮುತ್ತಣ್ಣ ದಾಸನಾಳ, ನಿಂಗನಗೌಡ, ದುರುಗಪ್ಪ ಪೂಜಾರಿ, ಬೆಟ್ಟಪ್ಪ, ಬಸಪ್ಪ, ಗಾದೆಪ್ಪ ಬೆಣಕಲ್, ಶರಣಪ್ಪ, ಚಾಂದಬೀ, ನೂರ್‌ಜಾನ್‌ಬಿ, ಶಂಕರಗೌಡ, ಪಂಪಾಪತಿ, ಹನುಮೇಶ ದಾಸನಾಳ, ಮಹಾಂತಮ್ಮ ದಾಸನಾಳ, ಯಮನೂರಸಾಬ, ಬೆಟ್ಟಪ್ಪ, ಹನುಮಮ್ಮ, ಶರಣಪ್ಪ, ಫಕೀರಸಾಬ್, ಗೌರಮ್ಮ, ಹನುಮಂತಪ್ಪ, ಬಾಳಪ್ಪ ಹುಲಿಹೈದರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.