ADVERTISEMENT

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2025, 16:12 IST
Last Updated 8 ಜೂನ್ 2025, 16:12 IST
ಕನಕಗಿರಿಯಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಪಶು ಸಂಗೋಪನೆ ಇಲಾಖೆಯ ತಾಲ್ಲೂಕು ಅಧಿಕಾರಿ ಅರುಣಗುರು ಅವರು ಸಸಿ‌ನೆಟ್ಟರು
ಕನಕಗಿರಿಯಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಪಶು ಸಂಗೋಪನೆ ಇಲಾಖೆಯ ತಾಲ್ಲೂಕು ಅಧಿಕಾರಿ ಅರುಣಗುರು ಅವರು ಸಸಿ‌ನೆಟ್ಟರು   

ಕನಕಗಿರಿ: ‘ಪರಿಸರ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ’ ಎಂದು ಪಶುಸಂಗೋಪನೆ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆ ತಾಲ್ಲೂಕು ಅಧಿಕಾರಿ ಡಾ.‌ಅರುಣಗುರು ತಿಳಿಸಿದರು.

ಪಟ್ಟಣದಲ್ಲಿ ಈಚೆಗೆ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ‘ಪರಿಸರವನ್ನು ನಾವು ರಕ್ಷಣೆ ಮಾಡಿದರೆ, ಅದು ನಮ್ಮನ್ನು ಉಸಿರಿರೋವರೆಗೂ ರಕ್ಷಣೆ ಮಾಡುತ್ತದೆ. ಪರಿಸರ ಸಂರಕ್ಷಣೆ, ಸಸಿ ನೆಡುವು ವಿಷಯ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗದೆ ನಿರಂತರವಾಗಿರಬೇಕು. ಸಸಿಗಳನ್ನು ನೆಟ್ಟು ಸ್ವಂತ ಮಕ್ಕಳಂತೆ ಅವುಗಳನ್ನು ಪೋಷಣೆ ಮಾಡಬೇಕು. ಮುಂದಿನ‌ ದಿನಗಳಲ್ಲಿ ಗಿಡಗಳು ನಮಗೆ ಅಶ್ರಯ ನೀಡುತ್ತವೆ’ ಎಂದರು.

ಜಾನುವಾರು ಅಧಿಕಾರಿ ಲೋಕೇಶ ಬಿರಾದಾರ, ಡಾ.ಹೀನಾ ಫಾತೀಮಾ, ಡಾ.ಶ್ವೇತಾ, ಸಿಬ್ಬಂದಿ ಹೊನ್ನೂರ ಭಾಷ, ಶಿವರಾಜ, ಕನಕಾಚಲ ಸೇರಿದಂತೆ ಇತರರು ಹಾಜರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.