ADVERTISEMENT

ಪರಿಸರ ಪ್ರಜ್ಞೆ ಮೂಡಲಿ: ಸೋಮಶೇಖರ್ ಬಿರಾದರ್

​ಪ್ರಜಾವಾಣಿ ವಾರ್ತೆ
Published 6 ಜೂನ್ 2021, 11:13 IST
Last Updated 6 ಜೂನ್ 2021, 11:13 IST
ಕುಕನೂರಿನ ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಸಸಿ ನೆಡಲಾಯಿತು
ಕುಕನೂರಿನ ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಸಸಿ ನೆಡಲಾಯಿತು   

ಕುಕನೂರು: ‘ಪ್ರತಿಯೊಬ್ಬರಲ್ಲಿಯೂ ಪರಿಸರ ಪ್ರಜ್ಞೆ ಮೂಡಬೇಕು’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ್ ಬಿರಾದರ್ ಹೇಳಿದರು.

ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಇಲ್ಲಿನ ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಶನಿವಾರ ಸಸಿ ನೆಟ್ಟು ಮಾತನಾಡಿದರು.

ಗುಡ್ಡ, ಗಿಡ–ಮರಗಳನ್ನು ಕಡಿದು ದೊಡ್ಡ ದೊಡ್ಡ ಬಂಗಲೆಗಳನ್ನು ಕಟ್ಟಿಕೊಳ್ಳು­ತ್ತಿದ್ದೇವೆ. ಬದುಕಿಗೆ ಬೇಕಾದದ್ದು, ಉತ್ತಮ ಪರಿಸರ ಎಂಬುದನ್ನು ಮರೆತು ವೈಭವೀಕರಣದ ಜೀವನವೇ ಬದುಕು ಎಂಬ ಭ್ರಮೆಯಲ್ಲಿದ್ದೇವೆ. ದಿನೇ ದಿನೇ ಪರಿಸರ ನಾಶವಾಗುತ್ತಿರುವುದರಿಂದ ಪ್ರಕೃತಿ ವಿಕೋಪಗಳು ಹೆಚ್ಚಾಗುತ್ತಿವೆ. ಇದು ಜನಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಕಾಡು ಉಳಿದರೆ ನಾಡು ಬೆಳೆಯುತ್ತದೆ ಎಂದರು.

ಗಿರಿಧರ್ ಜೋಷಿ, ಆನಂದ ಗರೂರ, ಸುಶಿಲೇಂದ್ರರಾವ್ ದೇಶಪಾಂಡೆ, ಬಸಪ್ಪ, ಸತೀಶ ಹಟ್ಟಿ, ಶರಣಪ್ಪ ಹಾಳಕೇರಿ, ರೇಣುಕಾ ಠಂಕಾದ್, ಪೂಜಾ, ರವಿಕುಮಾರ, ಪಕ್ಕಿರಪ್ಪ, ಶಿವರಾಜ ಹಾಗೂ ರವಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.