ADVERTISEMENT

10ರಂದು ಮಾರುತೇಶ್ವರ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2021, 6:25 IST
Last Updated 7 ಡಿಸೆಂಬರ್ 2021, 6:25 IST
ಕಾರಟಗಿ ತಾಲ್ಲೂಕಿನ ಈಳಿಗನೂರು ಗ್ರಾಮದಲ್ಲಿ ಭಾನುವಾರ ರಥ ಹಾಗೂ ಉಚ್ಛಾಯವನ್ನು ಭಕ್ತರು ಹೊರ ತೆಗೆದರು
ಕಾರಟಗಿ ತಾಲ್ಲೂಕಿನ ಈಳಿಗನೂರು ಗ್ರಾಮದಲ್ಲಿ ಭಾನುವಾರ ರಥ ಹಾಗೂ ಉಚ್ಛಾಯವನ್ನು ಭಕ್ತರು ಹೊರ ತೆಗೆದರು   

ಈಳಿಗನೂರ (ಕಾರಟಗಿ): ಗ್ರಾಮದಲ್ಲಿ ಶರಣಬಸವೇಶ್ವರರ ಪುರಾಣ ಮಂಗಲೋತ್ಸವ ಮತ್ತು ಮಾರುತೇಶ್ವರ ರಥೋತ್ಸವ ನಡೆಯುವ ಕಾರಣ ಭಾನುವಾರ ರಥ ಹಾಗೂ ಉಚ್ಛಾಯ ಹೊರ ತೆಗೆಯಲಾಯಿತು.

ಡಿ. 8ರಂದು ಶರಣಬಸವೇಶ್ವರರ ಪುರಾಣ ಮಂಗಲೋತ್ಸವ, 9ರಂದು ಮಾರುತೇಶ್ವರ ದೇವಸ್ಥಾನದಲ್ಲಿ ಹೋಮ, ಹವನ ನಡೆಯಲಿದ್ದು, ಸಂಜೆ ಕಾರ್ತಿಕ ದೀಪೋತ್ಸವ, 10ರಂದು ಬೆಳಿಗ್ಗೆ ಉಚ್ಛಾಯ, ಅನ್ನಸಂತರ್ಪಣೆ ಹಾಗೂ ಸಂಜೆ ಮಾರುತೇಶ್ವರ ರಥೋತ್ಸವ ಜರುಗಲಿದೆ.

ಎಲ್ಲ ಧಾರ್ಮಿಕ ಕಾರ್ಯಗಳಲ್ಲಿ ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮಾರುತೇಶ್ವರ ದೇವಸ್ಥಾನ ಸಮಿತಿ ಪ್ರಕಟಣೆಯಲ್ಲಿ ಮನವಿ ಮಾಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.