ADVERTISEMENT

ಪರಿಶಿಷ್ಟರಿಗೆ ದಿನಸಿ ಕಿಟ್ ವಿತರಣೆ

​ಪ್ರಜಾವಾಣಿ ವಾರ್ತೆ
Published 29 ಮೇ 2021, 12:09 IST
Last Updated 29 ಮೇ 2021, 12:09 IST
ಕುಕನೂರು ತಾಲ್ಲೂಕಿನ ಮಸಬಹಂಚಿನಾಳ ಗ್ರಾಮದ ಪರಿಶಿಷ್ಟರ ಕಾಲೊನಿಯಲ್ಲಿ ಆಹಾರ ಧಾನ್ಯದ ಕಿಟ್ ವಿತರಿಸಲಾಯಿತು
ಕುಕನೂರು ತಾಲ್ಲೂಕಿನ ಮಸಬಹಂಚಿನಾಳ ಗ್ರಾಮದ ಪರಿಶಿಷ್ಟರ ಕಾಲೊನಿಯಲ್ಲಿ ಆಹಾರ ಧಾನ್ಯದ ಕಿಟ್ ವಿತರಿಸಲಾಯಿತು   

ಮಸಬಹಂಚಿನಾಳ (ಕುಕನೂರು): ‘ಕೊರೊನಾ ಬಂದಾಗಿನಿಂದಲೂ ದುಡಿದು ತಿನ್ನುವ ವರ್ಗಗಳಿಗೆ ಎಲ್ಲಿಲ್ಲದ ಕಷ್ಟ ಎದುರಾಗಿದೆ’ ಎಂದು ಅಪೆಕ್ಸ್ ಬ್ಯಾಂಕ್‌ನ ವ್ಯವಸ್ಥಾಪಕ ಈರಪ್ಪ ಕಡದಳ್ಳಿ ಹೇಳಿದರು.

ತಾಲ್ಲೂಕಿನ ಮಸಬಹಂಚಿನಾಳ ಗ್ರಾಮದ ಪರಿಶಿಷ್ಟರ ಕಾಲೊನಿಯಲ್ಲಿ ಆಹಾರ ಧಾನ್ಯದ ಕಿಟ್ ವಿತರಿಸಿ ಮಾತನಾಡಿದರು.

ಅದರಲ್ಲೂ ಲಾಕ್‌ಡೌನ್ ಜಾರಿ ಮಾಡಿದ್ದರಿಂದ ಕೆಲಸವಿಲ್ಲದೇ ತುತ್ತು ಅನ್ನಕ್ಕಾಗಿ ಪರದಾಡುವಂತ ಸ್ಥಿತಿ ಇಲ್ಲಿನ ಜನರಿಗೆ ಬಂದಿದೆ. ಅವರ ಕಷ್ಟಕ್ಕೆ ಸ್ಪಂದಿಸುವುದೇ ಮನುಷ್ಯನ ನಿಜವಾದ ಧರ್ಮ. ಆ ನಿಟ್ಟಿನಲ್ಲಿ ನಮ್ಮ ಶಾಸಕ ಹಾಲಪ್ಪ ಆಚಾರ ಅವರ ಅಭಿಮಾನ ದಿಂದ ಆಹಾರ ಕಿಟ್‌ಗಳನ್ನು ನೀಡಿ ಒಳ್ಳೆಯ ಕೆಲಸ ಮಾಡುತ್ತಿದ್ದೇವೆ ಎಂದರು.

ADVERTISEMENT

ಈ ಆಹಾರ ಕಿಟ್‌ಗಳನ್ನು ತಾಲ್ಲೂಕಿನ ಮಾಳೆಕೊಪ್ಪ ಹಾಗೂ ಯಲಬುರ್ಗಾ ತಾಲ್ಲೂಕಿನ ಸಂಕನೂರು, ತೊಂಡಿಹಾಳ ಗ್ರಾಮಗಳಿಗೂ ನೀಡುತ್ತಿದ್ದೇವೆ ಎಂದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಾಗರಾಜ್ ಗಿರಡ್ಡಿ ಮಾತನಾಡಿ,‘ಸ್ಥಿತಿವಂತರು ಮುಂದೆ ಬಂದು ಬಡ ಕುಟುಂಬಗಳನ್ನು ಗುರುತಿಸಿ ಆಹಾರ ಪದಾರ್ಥಗಳ ಕಿಟ್ ವಿತರಿಸಿದರೆ ಬಹುಳ ಉಪಕಾರ ಮಾಡಿದಂತಾಗುತ್ತದೆ’ ಎಂದರು.

ಕೊರೊನಾ ಸೋಂಕು ತಡೆಗಟ್ಟಲು ಮನೆಯಲ್ಲಿ ಸುರಕ್ಷಿತವಾಗಿರಿ, ಕಡ್ಡಾಯವಾಗಿ ಮಾಸ್ಕ್ ಧರಿಸಿ, ಎಲ್ಲರೂ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್ ಧರಿಸಿಯೇ ಅವಶ್ಯಕ ಇದ್ದಾಗ ಹೊರಬರಬೇಕು ಎಂದು ಜಾಗೃತಿ ಮೂಡಿಸಿದರು.

ಉದ್ಯಮಿ ಅನಿಲ್ ಆಚಾರ, ಪ್ರಭು ಆಚಾರ್, ಈಶಪ್ಪ ಅಂಗಡಿ, ಯಮನಪ್ಪ ಇಳಿಗೇರ್, ಶರಣಯ್ಯ ಗಾಂಜಿ, ಪ್ರಕಾಶ್ ಇಳಿಗೇರ್, ಹನುಮಂತ್ ಬನ್ನಿಕೊಪ್ಪ, ಆದಪ್ಪ ಎಲೆ, ಶರಣಪ್ಪ ರಾಮಶೆಟ್ಟಿ, ಸಿದ್ಲಿಂಗಪ್ಪ ಈಶ್ವರಗೌಡ, ಬಸವರಾಜ ಕಡದಳ್ಳಿ , ಮಂಜುನಾಥ್ ಬೇವಿನಮರದ, ಆರೂಢಪ್ಪ, ಬಸವರಾಜ್ ಪೂಜಾರ್, ಶರಣಪ್ಪ ದೇವರಮನಿ, ಹಮರೆಡ್ಡಿ ರಾಜುರು, ಮುತ್ತು ಹೂಗಾರ, ಯಮನೂರಪ್ಪ ಕಡದಳ್ಳಿ ಹಾಗೂ ಶಿವಲೀಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.