
ಕಾರಟಗಿ: ಪಟ್ಟಣದ ಶರಣಬಸವೇಶ್ವರ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆಯ ನಾಲ್ವರು ವಿದ್ಯಾರ್ಥಿಗಳು ಹಿಮಾಚಲ ಪ್ರದೇಶದಲ್ಲಿ ಜನವರಿ 5ರಿಂದ 9ರವರೆಗೆ ನಡೆಯುವ 69ನೇ ರಾಷ್ಟ್ರ ಮಟ್ಟದ ಬಾಲಕರ ವಾಲಿಬಾಲ್ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ.
ರಾಜ್ಯದ ತಂಡದಲ್ಲಿ ಪಟ್ಟಣದ ವಿದ್ಯಾರ್ಥಿಗಳಾದ ರಾಜೇಶ್, ಮಯೂರ, ಮಹೇಶಬಾಬು ಹಾಗೂ ಕಾಶಿನಾಥ ಇದ್ದಾರೆ.
ಪಟ್ಟಣದಿಂದ ಡಿ.31ರಂದು ಬೆಂಗಳೂರಿಗೆ ತೆರಳಿ, ವಿವಿಧೆಡೆ ವಿದ್ಯಾರ್ಥಿಗಳ ತಂಡದೊಂದಿಗೆ ಪ್ರಯಾಣ ಬೆಳೆಸುವರು. ಬೆಂಗಳೂರುವರೆಗಿನ ಖರ್ಚು ಶಾಲಾಡಳಿತ ಮಂಡಳಿ ನೀಡಿ, ವಿದ್ಯಾರ್ಥಿಗಳಿಗೆ ರಾಷ್ಟ್ರಮಟ್ಟದಲ್ಲೂ ಸಾಧನೆ ಮೆರೆದು ಜಯಶೀಲರಾಗಲಿ ಎಂದು ಶುಭಹಾರೈಸಿದರು.
ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಎಸ್.ಬಿ.ಶೆಟ್ಟರ್, ಉಪಾಧ್ಯಕ್ಷ ಜಗದೀಶ ಅವರಾದಿ, ಕಾರ್ಯದರ್ಶಿ ಚಂದ್ರಶೇಖರ ಸೋಮಲಾಪುರ, ಖಜಾಂಚಿ ಮಲ್ಲಿಕಾರ್ಜುನ ಕೊಟಗಿ, ಶಿಕ್ಷಣ ಇಲಾಖೆಯ ರಾಘವೇಂದ್ರ, ನಿರ್ದೇಶಕ ರಾಕೇಶ ಕಂಚಿ, ಮುಖ್ಯಶಿಕ್ಷಕ ಮಹಾಂತೇಶ್ ಗದ್ದಿ, ಅಮರೇಶ ಪಾಟೀಲ, ಶರಣಮ್ಮ ಅಂಗಡಿ, ಜಗದೀಶ ಹಳ್ಳೂರ, ದೈಹಿಕ ಶಿಕ್ಷಕರೂ ಆದ ತಂಡದ ಕೋಚರ್ ಬಸವರಾಜ್ ಮೂಲಿಮನಿ, ಸಂಗೀತಾ, ಪುಷ್ಪಲತಾ, ಗಿರೀಶ್, ಎಂ.ಡಿ. ಇಬ್ರಾಹಿಂ, ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.