ADVERTISEMENT

ಹನಮನಾಳನಲ್ಲಿ ಉಚಿತ ಎಲುಬು-ಕೀಲು ಚಿಕಿತ್ಸಾ ಶಿಬಿರ

​ಪ್ರಜಾವಾಣಿ ವಾರ್ತೆ
Published 26 ಮೇ 2025, 15:13 IST
Last Updated 26 ಮೇ 2025, 15:13 IST
ಸ್ಥಳೀಯ ಹಿರಿಯವರು ಹಾಗೂ ಗ್ರಾಮ ಮುಖಂಡರು ಶಿಬಿರದ ಯಶಸ್ಸಿಗೆ ಸಹಕಾರ ನೀಡಿದ ತಪಶೆಟ್ಟಿ ಆಸ್ಪತ್ರೆ ಹಾಗೂ ಡಾ. ಸಂದೀಪ ತಪಶೆಟ್ಟಿ ಅವರಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿ ಸನ್ಮಾನಿಸಿ ಗೌರವಿಸಿದರು.
ಸ್ಥಳೀಯ ಹಿರಿಯವರು ಹಾಗೂ ಗ್ರಾಮ ಮುಖಂಡರು ಶಿಬಿರದ ಯಶಸ್ಸಿಗೆ ಸಹಕಾರ ನೀಡಿದ ತಪಶೆಟ್ಟಿ ಆಸ್ಪತ್ರೆ ಹಾಗೂ ಡಾ. ಸಂದೀಪ ತಪಶೆಟ್ಟಿ ಅವರಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿ ಸನ್ಮಾನಿಸಿ ಗೌರವಿಸಿದರು.   

ಹನುಮಸಾಗರ: ತಪಶೆಟ್ಟಿ ಆಸ್ಪತ್ರೆ ನೇತೃತ್ವದಲ್ಲಿ ರವಿವಾರರಂದು ಹನಮನಾಳದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಉಚಿತ ಎಲುಬು, ಕೀಲು, ಬೆನ್ನು ಹುರಿ ಹಾಗೂ ಸಂಧಿವಾತ ಸಂಬಂಧಿತ ತಜ್ಞ ಚಿಕಿತ್ಸೆ ಶಿಬಿರವನ್ನು ಆಯೋಜಿಸಲಾಗಿತ್ತು.

ಈ ಶಿಬಿರದಲ್ಲಿ ಖ್ಯಾತ ಸಂಧಿವಾತ ತಜ್ಞ ಡಾ.ಸಂದೀಪ ತಪಶೆಟ್ಟಿ ಅವರು 300ಕ್ಕೂ ಹೆಚ್ಚು ರೋಗಿಗಳಿಗೆ ನಿಖರ ತಪಾಸಣೆ ನಡೆಸಿ, ಉಚಿತ ಔಷಧಿ ವಿತರಿಸಿದರು. ಡಾ.ಸಂದೀಪ ತಪಶೆಟ್ಟಿ ಅವರು ಕೀಲು ನೋವು, ಬೆನ್ನುನೋವು, ಸ್ನಾಯು ಬೇದನೆ, ಸಂಧಿವಾತ ಇತ್ಯಾದಿ ಸಮಸ್ಯೆಗಳ ತಜ್ಞರಾಗಿ ಹೆಸರುವಾಸಿಯಾಗಿದ್ದು, ಹಲವು ವರ್ಷಗಳಿಂದ ಈ ಕ್ಷೇತ್ರದಲ್ಲಿ ಜನಸೇವೆಯಲ್ಲಿ ತೊಡಗಿರುವ ಸಾಧನಾಶೀಲ ವೈದ್ಯರಾಗಿದ್ದಾರೆ. ಶಿಬಿರದಲ್ಲಿ ಅವರು ರೋಗಿಗಳಿಗೆ ನವೀಕೃತ ಚಿಕಿತ್ಸಾ ವಿಧಾನಗಳ ಬಗ್ಗೆ ಮಾಹಿತಿ ನೀಡಿ, ಹೇಗೆ ಜೀವನಶೈಲಿಯಲ್ಲಿ ಸರಳ ಬದಲಾವಣೆಗಳು ಆರೋಗ್ಯ ಸುಧಾರಣೆಗೆ ಸಹಾಯ ಮಾಡುತ್ತವೆ ಎಂಬುದನ್ನು ವಿವರಿಸಿದರು.

ಹನಮನಾಳ ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಸದುಪಯೋಗಪಡೆದುಕೊಂಡರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.