ADVERTISEMENT

ಸ್ವಾತಂತ್ರ್ಯ ಕ್ರಾಂತಿಕಾರಿಗಳ ಬಲಿದಾನದ ಫಲ: ಅನೂಪ್ ದೇಶಪಾಂಡೆ

ಅಮೃತ ಭಾರತಿಗೆ ಕನ್ನಡದಾರತಿ ಅಭಿಯಾನ

​ಪ್ರಜಾವಾಣಿ ವಾರ್ತೆ
Published 29 ಮೇ 2022, 4:54 IST
Last Updated 29 ಮೇ 2022, 4:54 IST
ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣಾ ಶಿಲಾ ಫಲಕ ಅನಾವರಣ ಮಾಡಲಾಯಿತು
ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣಾ ಶಿಲಾ ಫಲಕ ಅನಾವರಣ ಮಾಡಲಾಯಿತು   

ಅಳವಂಡಿ: ‘ಸ್ವಾತಂತ್ರ್ಯ ಕ್ರಾಂತಿಕಾರಿಗಳ ಬಲಿದಾನದ ಫಲ’ ಎಂದು ವಕೀಲ ಅನೂಪ್ ದೇಶಪಾಂಡೆ ಅಭಿಪ್ರಾಯಪಟ್ಟರು.

ಗ್ರಾಮದ ಸಿದ್ದೇಶ್ವರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆದ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕರ್ನಾಟಕದ ಕೊಡುಗೆ ಮಹತ್ತರವಾದದ್ದು, ಕರ್ನಾಟಕದ ಹಲವು ಮಹನೀಯರು ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ನಡೆಸಿದ ತ್ಯಾಗ–ಬಲಿದಾನ ಅಚ್ಚಳಿಯದೇ ಉಳಿದಿದೆ. ಅದರಲ್ಲಿ ಅಳವಂಡಿ ಹೋರಾಟಗಾರರ ಪಾತ್ರ ಪ್ರಮುಖವಾಗಿದೆ ಎಂದರು.

ADVERTISEMENT

ಮರುಳಾರಾಧ್ಯ ಶಿವಾಚಾರ್ಯರು ಮಾತನಾಡಿ,‘ಯುವಕರು ದೇಶಪ್ರೇಮ ಬೆಳೆಸಿಕೊಳ್ಳಬೇಕು. ಹೋರಾಟಗಾರರ ಕಿಚ್ಚು ಹಾಗೂ ಸಾಹಸ ಮೈಗೂಡಿಸಿಕೊಳ್ಳಬೇಕು’ ಎಂದರು.

ಗ್ರಾಮದಲ್ಲಿ ಭಾರತಾಂಬೆ ಭಾವಚಿತ್ರದ ಮೆರವಣಿಗೆ ನಡೆಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹಾಗೂ ಇತರ ಮುಖಂಡರು ವಾದ್ಯ ಬಾರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಕಲಾ ತಂಡಗಳು, ವಾದ್ಯ ಮೇಳಗಳು ಭಾಗವಹಿಸಿದ್ದವು. ನಂತರ ಮಕ್ಕಳಿಂದ ಸಾಂಸ್ಕೃತಿಕ ಹಾಗೂ ಶಕುಂತಲಾ ಬೇನಾಳ ತಂಡದಿಂದ ಸಂಗೀತ ಕಾರ್ಯಕ್ರಮ ನಡೆದವು.

ತಹಶೀಲ್ದಾರ್ ವಿಠ್ಠಲ ಚೌಗಲೆ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ ಬೆಣಕಲ್, ಉಪಾಧ್ಯಕ್ಷೆ ಶಂಕ್ರಮ್ಮ ಜೋಗಿನ, ಉಪ ತಹಶೀಲ್ದಾರ್ ಶರಣಬಸವೇಶ ಕಳ್ಳಿಮಠ, ಗ್ರೇಡ್–2 ತಹಶೀಲ್ದಾರ್ ಗವಿಸಿದ್ದಪ್ಪ, ಪಿಎಸ್ಐ ಮಾತಂಡಪ್ಪ , ಪಿಡಿಒ ರುದ್ರಯ್ಯ ಹಿರೇಮಠ, ಇಸಿಒ ಗವಿಸಿದ್ದೇಶ ಶಟ್ಟರ, ಕಾರ್ಯಕ್ರಮ ಸಂಚಾಲಕ ವೆಂಕಟೇಶ, ಸಿಆರ್‌ಪಿಗಳಾದ ಹನುಮಂತಪ್ಪ ಕುರಿ, ವಿಜಯಕುಮಾರ ಟಿಕಾರೆ, ವೀರೇಶ ಕೌಟಿ, ಬಸವರಾಜ, ಪ್ರಮುಖರಾದ ನಾಗಪ್ಪ ಸವಡಿ, ಬಸವರಡ್ಡೆಪ್ಪ ಹಳ್ಳಿಕೇರಿ, ದೇವಪ್ಪ ಕಟ್ಟಿಮನಿ, ಡಾ,ಸಿದ್ದಲಿಂಗಸ್ವಾಮಿ ಇನಾಮದಾರ, ಎ.ಟಿ.ಕಲ್ಮಠ, ಸೂರ್ಯಕಾಂತ, ಹನಮಂತಗೌಡ ಗಾಳಿ, ಹನುಮಂತಪ್ಪ ಎಲಿಗಾರ, ಶರಣಪ್ಪ ಜಡಿ, ಬಸವರಡ್ಡಿ ರಡ್ಡೇರ, ಸಾಗರ, ಶಿವಪ್ರಸಾದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.