
ಪ್ರಜಾವಾಣಿ ವಾರ್ತೆ
ಬೆಲ್ಜಿಯಂ ದೇಶದ ಮಹಿಳೆ ಚೈರಲ್ ಮೈಕಲ್ ಅಂಥೋನಿಯಾ ಎಂ
ಗಂಗಾವತಿ: ತಾಲ್ಲೂಕಿನ ಹನುಮನಹಳ್ಳಿ ಗ್ರಾಮದ ಋಷಿಮುಖ ಪರ್ವತದಲ್ಲಿ ಕಳೆದ ನಾಲ್ಕು ದಶಕಗಳಿಂದ ವಾಸವಿದ್ದ ಬೆಲ್ಜಿಯಂ ದೇಶದ ಮಹಿಳೆ ಚೈರಲ್ ಮೈಕಲ್ ಅಂಥೋನಿಯಾ ಎಂ (68) ವಯೋಸಹಜ ಕಾಯಿಲೆಯಿಂದ ಬುಧವಾರ ರಾತ್ರಿ ನಿಧನರಾಗಿದ್ದಾರೆ.
ಅವರು ಹೊಲಿಸ್ಟಿಕ್ ಆರ್ಟಿಸನ್ಸ್ ಮೊಡ್ರೆನ್ ಸ್ಟ್ರೀಮ್ ಆನೆಗೊಂದಿ ಗ್ರೂಪ್ ಆಫ್ ಕರ್ನಾಟಕ ಎಂಬ ಎನ್‌ಜಿಒ ಮೂಲಕ ಕರ ಕುಶಲ ವಸ್ತುಗಳ ತಯಾರಿಕೆ ಮತ್ತು ಮಾರಾಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
ಸ್ಥಳಕ್ಕೆ ಗ್ರಾಮ ಸಹಾಯಕ, ಗ್ರಾಮಸ್ಥರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾವಿನಲ್ಲಿ ಯಾವುದೇ ಅನುಮಾನವಿಲ್ಲ ಎಂದು ಗಂಗಾವತಿ ಗ್ರಾಮೀಣ ಪೊಲೀಸ್ ಅಧಿಕಾರಿಗಳು ಹೇಳಿದ್ದು ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.