ADVERTISEMENT

ಬದುಕಿನ ಗಾಢ ಅನುಭವಗಳೇ ಕಾವ್ಯಕ್ಕೆ ಸ್ಪೂರ್ತಿ: ನೀಲಮ್ಮ ಹಿರೇಮಠ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 7:23 IST
Last Updated 7 ನವೆಂಬರ್ 2025, 7:23 IST
ಗಂಗಾವತಿ ನಗರದ ಶ್ರೀಕೊಲ್ಲಿ ನಾಗೇಶ್ವರರಾವ್ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗದಿಂದ ಕವಿಕಾವ್ಯ ಸಂವಾದ ಕಾರ್ಯಕ್ರಮ ಜರುಗಿತು
ಗಂಗಾವತಿ ನಗರದ ಶ್ರೀಕೊಲ್ಲಿ ನಾಗೇಶ್ವರರಾವ್ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗದಿಂದ ಕವಿಕಾವ್ಯ ಸಂವಾದ ಕಾರ್ಯಕ್ರಮ ಜರುಗಿತು   

ಗಂಗಾವತಿ:ನಗರದ ಶ್ರೀಕೊಲ್ಲಿ ನಾಗೇಶ್ವರರಾವ್ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗದಿಂದ ನಡೆದ ಕವಿಕಾವ್ಯ ಸಂವಾದ ಕಾರ್ಯಕ್ರಮದಲ್ಲಿ ನೀಲಮ್ಮ ಹಿರೇಮಠ ಅವರ ‘ಕರುಳಕಂಪನ’ ಕವನ ಸಂಕಲನದ ಪರಿಚಯ ಜರುಗಿತು.

ಕವಿಯತ್ರಿ ನೀಲಮ್ಮ ಹಿರೇಮಠ ಮಾತನಾಡಿ, ‘ಬದುಕಿನ ಗಾಢ ಅನುಭವಗಳೇ ಕಾವ್ಯಕ್ಕೆ ಸ್ಪೂರ್ತಿ. ಜೀವನಾನುಭವಗಳು ಕವಿತೆ ರಚಿಸಲು ಪ್ರೇರಣೆ ನೀಡುತ್ತವೆ. ಬಾಲ್ಯದ ಅನುಭವಗಳನ್ನು ಕಾವ್ಯದ ಮೂಲಕ ಹಂಚಿಕೊಂಡಿರುವೆ. ನಿಂದೆ, ಅಪಮಾನಗಳು ಬರುವುದು ಸಹಜ. ನಮ್ಮನ್ನು ಕುಗ್ಗಿಸುವ ವಿದ್ಯಮಾನಗಳು ನಡೆದರೂ ಹಿಂಜರಿಕೆಯಿಲ್ಲದೆ ಮುನ್ನಡೆಯಬೇಕು’ ಎಂದರು.

ಐಶ್ವರ್ಯ ಕೃತಿ ಪರಿಚಯಿಸಿದರು. ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗದ ಸಂಯೋಜಕಿ ಮುಮ್ತಾಜ್ ಬೇಗಂ ಮಾತನಾಡಿದರು.

ADVERTISEMENT

ಶಿಕ್ಷಕ ಶಿವಪ್ರಸಾದ, ಸಹಾಯಕ ಪ್ರಾಧ್ಯಾಪಕ ರವಿ ಹಾದಿಮನಿ, ಉಪನ್ಯಾಸಕ ಬಸವರಾಜ ಗೌಡನ ಬಾವಿ, ಉಷಾರಾಣಿ, ಶಾಂತಮ್ಮ, ಗುಂಡೂರು ಪವನಕುಮಾರ, ಭಾಗ್ಯ, ಸುಧಾ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.