ADVERTISEMENT

ಗಂಗಾವತಿ | ‘ಕಾಲುವೆ ರಸ್ತೆಯಲ್ಲಿ ಟಿಪ್ಪರ್ ಸಂಚಾರ ತಡೆಯಿರಿ’

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2024, 5:24 IST
Last Updated 9 ಅಕ್ಟೋಬರ್ 2024, 5:24 IST
ತುಂಗಭದ್ರಾ ಎಡದಂಡೆ ಕಾಲುವೆ ಮೇಲೆ ಟಿಪ್ಪರ್ ಲಾರಿ ಸಂಚಾರ ತಡೆಗೆ ಒತ್ತಾಯಿಸಿ ರೈತರು ಗಂಗಾವತಿ ತಾಲ್ಲೂಕಿನ ವಡ್ಡರಹಟ್ಟಿ ಗ್ರಾಮದ ನೀರಾವರಿ ಇಲಾಖೆ ಕಾರ್ಯಪಾಲಕ ಎಂಜನಿಯರ್‌ ಅವರಿಗೆಅಭಿಯಂತರಿಗೆ ಮನವಿ ಸಲ್ಲಿಸಿದರು
ತುಂಗಭದ್ರಾ ಎಡದಂಡೆ ಕಾಲುವೆ ಮೇಲೆ ಟಿಪ್ಪರ್ ಲಾರಿ ಸಂಚಾರ ತಡೆಗೆ ಒತ್ತಾಯಿಸಿ ರೈತರು ಗಂಗಾವತಿ ತಾಲ್ಲೂಕಿನ ವಡ್ಡರಹಟ್ಟಿ ಗ್ರಾಮದ ನೀರಾವರಿ ಇಲಾಖೆ ಕಾರ್ಯಪಾಲಕ ಎಂಜನಿಯರ್‌ ಅವರಿಗೆಅಭಿಯಂತರಿಗೆ ಮನವಿ ಸಲ್ಲಿಸಿದರು   

ಗಂಗಾವತಿ: ಇಲ್ಲಿನ ಸಿದ್ದಿಕೇರಿ ಗ್ರಾಮದ ಸಮೀಪದ ಕರಿಕಲ್ಲಪ್ಪ ಕ್ಯಾಂಪ್ ಬಳಿ ತುಂಗಭದ್ರಾ ಎಡದಂಡೆ ಕಾಲುವೆಯ ಮಣ್ಣಿನ ರಸ್ತೆಯಲ್ಲಿ ಟಿಪ್ಪರ್ ಲಾರಿಗಳು ಸಂಚಾರಿಸುವುದನ್ನು ವಿರೋಧಿಸಿ ಸ್ಥಳೀಯ ರೈತರು ತಾಲ್ಲೂಕಿನ ವಡ್ಡರಹಟ್ಟಿ ಗ್ರಾಮದ ನೀರಾವರಿ ಇಲಾಖೆ ಕಾರ್ಯಪಾಲಕ ಎಂಜಿನಿಯ ಅವರಿಗೆ ಮನವಿ ಸ ಲ್ಲಿಸಿದರು.

ರೈತ ಯಮನಪ್ಪ ವಿಠಲಾಪೂರ ಮಾತನಾಡಿ, ‘ರಾಯಚೂರು, ಕೊಪ್ಪಳ ಜಿಲ್ಲೆ ರೈತರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ತುಂಗಭದ್ರಾ ಎಡದಂಡೆ ಕಾಲುವೆ ರೂಪಿಸಲಾಗಿದೆ. ವ್ಯವಸ್ಥಿತ ಮಟ್ಟದಲ್ಲಿ ನಿರ್ವಹಣೆ ಮಾಡಲಾಗುತ್ತಿದೆ. ಆದರೆ ಸ್ಥಳೀಯ ಕೆಲ ಪ್ರಭಾವಿಗಳು ಹಣದ ಆಸೆಗಾಗಿ ಕಾಲುವೆಯ ಮಣ್ಣಿನ ರಸ್ತೆಯಲ್ಲೇ ಟಿಪ್ಪರ್ ಲಾರಿಗಳಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದು 13 ಮತ್ತು 14ನೇ ಉಪ ಕಾಲುವೆಯ ತಡೆಗೊಡೆಗಳಿಗೆ ಹಾನಿಯಾಗಿ, ಬಿರುಕು ಬಿಟ್ಟು ಒಡೆಯುವ ಹಂತಕ್ಕೆ ತಲುಪಿದೆ’ ಎಂದು ಆರೋಪಿಸಿದರು.

‘ಹೀಗೇ ಮುಂದುವರಿದರೆ ನೀರು ಪೋಲಾಗುವ ಜತೆಗೆ ಬೆಳೆ ನಷ್ಟ ಆಗಲಿವೆ. ಕಾಲುವೆ ಒಡೆಯುವ ಭೀತಿಯೂ ಇದೆ. ನೀರಾವರಿ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಕಾಲುವೆ ಮೇಲೆ ಟಿಪ್ಪರ್ ಲಾರಿ ಸಂಚಾರ ಮಾಡದಂತೆ ಕ್ರಮ ಜರುಗಿಸಬೇಕು’ ಎಂದು ಕೋರಿದರು.

ADVERTISEMENT

ರೈತ ಬಿ.ಕೃಷ್ಣನಾಯಕ, ಸಣ್ಣಕ್ಕಿ ನೀಲಪ್ಪ, ಮೈಬೂಬ್‌ಸಾಬ್, ಗಿರೀಶ ಗಾಯಕವಾಡ್, ಲಕ್ಷ್ಮಿನಾರಾಯಣ, ಬಿ.ರಮೇಶ, ಹನುಮೇಶ, ಭೀಮೇಶ, ಲಿಂಗಪ್ಪ, ಮಹ್ಮದ, ನರೆಗಲ್ಲಪ್ಪ, ವಿ.ರಮೇಶ, ವಿಜಯ, ಉಮೇಶ, ಹನುಮೇಶ, ಕರಿಯಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.