ADVERTISEMENT

ಗಂಗಾವತಿ| ಯುವಕರ ಸ್ಫೂರ್ತಿಯ ಚಿಲುಮೆ ಛತ್ರಪತಿ ಶಿವಾಜಿ: ಶಂಕ್ರಪ್ಪ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 6:16 IST
Last Updated 20 ಫೆಬ್ರುವರಿ 2026, 6:16 IST
<div class="paragraphs"><p>ಗಂಗಾವತಿ ನಗರದ ರಾಯಚೂರ ರಸ್ತೆಯಲ್ಲಿನ ರೈಲ್ವೆ ನಿಲ್ದಾ ಣದ ಸಮೀಪ ಛತ್ರಪತಿ ಶಿವಾಜಿ ಮಹಾರಾಜರ ವೃತ್ತದ ಬಳಿ ಗುರುವಾರ ನಡೆದ 399ನೇ ಶಿವಾಜಿ ಮಹಾರಾಜರ ಜಯಂತಿ ನಡೆಯಿತು.</p></div>

ಗಂಗಾವತಿ ನಗರದ ರಾಯಚೂರ ರಸ್ತೆಯಲ್ಲಿನ ರೈಲ್ವೆ ನಿಲ್ದಾ ಣದ ಸಮೀಪ ಛತ್ರಪತಿ ಶಿವಾಜಿ ಮಹಾರಾಜರ ವೃತ್ತದ ಬಳಿ ಗುರುವಾರ ನಡೆದ 399ನೇ ಶಿವಾಜಿ ಮಹಾರಾಜರ ಜಯಂತಿ ನಡೆಯಿತು.

   

ಗಂಗಾವತಿ: ತಾಲ್ಲೂಕಿನ ಶ್ರೀರಾಮನಗರದ ಚಿಲುಕೂರಿ ನಾಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಿಸಲಾ‌ಯಿತು.

ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಶಂಕ್ರಪ್ಪ ಎಂ. ಮಾತನಾಡಿ, ಛತ್ರಪತಿ ಶಿವಾಜಿ ಕೇವಲ ಒಬ್ಬ ಯೋಧನಲ್ಲ. ರಾಷ್ಟ್ರದ ಪುನರುಜ್ಜೀವನದ ಸಂಕೇತ. ಸ್ವರಾಜ್ಯವೆಂಬ ಕನಸು ಕಾಣಲು ಧೈರ್ಯಬೇಕು. ಅದನ್ನು ಸಾಧಿಸಲು ಶಿವಾಜಿಯಂತಹ ಆತ್ಮಶಕ್ತಿ ಬೇಕು. ಗೆರಿಲ್ಲಾ ಯುದ್ಧತಂತ್ರ, ಕೋಟೆ ನಿರ್ಮಾಣ, ಸಮುದ್ರ ನೌಕಾಪಡೆಯ ಸ್ಥಾಪನೆ, ಅಷ್ಟಪ್ರಧಾನ ಮಂಡಳಿ ವ್ಯವಸ್ಥೆ ಮೂಲಕ ಶಿವಾಜಿ ಆಡಳಿತದ ಆಧುನಿಕ ದೃಷ್ಟಿಕೋನ ರೂಪಿಸಿದ್ದಾರೆ’ ಎಂದು ಹೇಳಿದರು‌.

ADVERTISEMENT

ಪ್ರಾಂಶುಪಾಲ ಕರಿಗೂಳಿ ಮಾತನಾಡಿ, ‘ಛತ್ರಪತಿ ಶಿವಾಜಿ ಅವರ ಸಮಾಧಿ ಸ್ಥಳ, ಮುಚ್ಚಲ್ಪಟ್ಟ ಇತಿಹಾಸ ಶೋಧಿಸಿ, ಹೊರತೆಗೆದು ಪ್ರಥಮ ಬಾರಿಗೆ ಶಿವಾಜಿ ಅವರ ಜಯಂತ್ಯುತ್ಸವ ಆಚರಣೆ ಮಾಡಿ, ನೈಜ ಇತಿಹಾಸ ಜಗತ್ತಿಗೆ ಸಾರಿದ ಸಾಮಾಜಿಕ ಪರಿವರ್ತನೆ ಪಿತಾಮಹ ಮಹಾತ್ಮ ಜ್ಯೋತಿರಾವ್ ಫುಲೆ ಅವರಿಗೆ ಸಲ್ಲುತ್ತದೆ’ ಎಂದು ಹೇಳಿದರು.

ರೋವರ್ಸ್ ಮತ್ತು ರೇಂಜರ್ಸ್ ಘಟಕದ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಅಧ್ಯಾಪಕ ಸರ್ಫರಾಜ್ ಅಹಮದ್, ವೀರೇಶ, ಐಕ್ಯೂಎಸಿ ಸಂಚಾಲಕ ರವಿಕುಮಾರ, ಶಶಿಕುಮಾರ, ವಿರೂಪಾಕ್ಷ ಕೆ., ಉಪನ್ಯಾಸಕ ವೆಂಕಟರಾಜು, ಈಶಪ್ಪ, ಅಯ್ಯಪ್ಪ, ಬಾಲಚಂದ್ರ ಸಾಯಿಕುಮಾರ, ಪ್ರವೀಣಕುಮಾರ, ಪೆನಜಾ, ಮಲ್ಲಯ್ಯ, ಸುರೇಶಗೌಡ, ಚೆನ್ನಮಲ್ಲ, ಸಹಾಯಕ ಸಿಬ್ಬಂದಿ, ಶಾಂತಿ, ಚಿನ್ನವರಪ್ರಸಾದ, ಶರಣಬಸವ ಸೇರಿ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.