ADVERTISEMENT

ಗಂಗಾವತಿ: ಅಕ್ಕಿ ಟ್ಯಾಂಕ್‌ ಒಡೆದು ಯುವಕ ಸಾವು

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2025, 16:18 IST
Last Updated 17 ಏಪ್ರಿಲ್ 2025, 16:18 IST
<div class="paragraphs"><p>ಸೈಯದ್ ಅರ್ಶದ್</p></div>

ಸೈಯದ್ ಅರ್ಶದ್

   

ಗಂಗಾವತಿ (ಕೊಪ್ಪಳ ಜಿಲ್ಲೆ): ಮಹಾರಾಣ ಪ್ರತಾಪ್ ಸಿಂಗ್ ವೃತ್ತದ ಸಮೀಪದ ಎನ್.ಆರ್ ರೈಸ್ ಮಿಲ್‌ನಲ್ಲಿ ಆಪರೇಟರ್ ಕೆಲಸ ಮಾಡುವ ಯುವಕ ಅಕ್ಕಿ ಸಂಗ್ರಹದ ಟ್ಯಾಂಕ್‌ ಒಡೆದು, ಅಕ್ಕಿಯಡಿ ಸಿಲುಕಿ ಮೃತಪಟ್ಟ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.

ಮೆಹಬೂಬ ನಗರದ ನಿವಾಸಿ ಸೈಯದ್ ಅರ್ಶದ್ (27) ಮೃತರು. ಎಂದಿನಂತೆ ಅಕ್ಕಿ ಸಂಗ್ರಹದ ಟ್ಯಾಂಕ್‌ನಿಂದ ಅಕ್ಕಿ ಹೊರ ಬಿಡುವ ವೇಳೆ ತಾಂತ್ರಿಕ ದೋಷ ಸಂಭವಿಸಿ, ಸುಮಾರು 250 ಟನ್ ಅಕ್ಕಿ ಸಂಗ್ರಹದ ಟ್ಯಾಂಕ್ ಒಡೆದು ಅವಘಡ ಸಂಭವಿಸಿದೆ.

ADVERTISEMENT

ಕೂಡಲೇ ಅಗ್ನಿಶಾಮಕ ದಳ, ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದರು. 3‌ ಜೆಸಿಬಿ, 1 ಕ್ರೇನ್ ಸಹಾಯದಿಂದ 6 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ಅಕ್ಕಿ ತೆರವು ಮಾಡಿದ ನಂತರ ಯುವಕನ ಮೃತದೇಹ ಪತ್ತೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.