ADVERTISEMENT

Video | ಕೊಪ್ಪಳದ ಅಜ್ಜನ ಜಾತ್ರೆಗೆ ರೊಟ್ಟಿ ತಯಾರಿ ಶುರು

​ಪ್ರಜಾವಾಣಿ ವಾರ್ತೆ
Published 13 ಜನವರಿ 2025, 13:35 IST
Last Updated 13 ಜನವರಿ 2025, 13:35 IST

ಕೊಪ್ಪಳದ ಗವಿಸಿದ್ಧೇಶ್ವರ ಮಠದ ಜಾತ್ರೆ, ಕಲ್ಯಾಣ ಕರ್ನಾಟಕ ಭಾಗ ಮಾತ್ರವಲ್ಲದೆ, ರಾಜ್ಯದಲ್ಲಿಯೇ ಪ್ರಮುಖ ಜಾತ್ರಾ ಮಹೋತ್ಸವಗಳಲ್ಲೊಂದು. ಇದು, ರೊಟ್ಟಿ ಜಾತ್ರೆ ಎಂದೂ ಪ್ರಸಿದ್ಧ. ಜಾತ್ರೆಯ ಅಂಗವಾಗಿ ತಯಾರಿ ಕಾರ್ಯ ಭರದಿಂದ ಸಾಗಿದ್ದು, ಈಗಾಗಲೇ ಅಂದಾಜು 15 ಲಕ್ಷ ರೊಟ್ಟಿ ಸಂಗ್ರಹವಾಗಿವೆ. ಇನ್ನೂ ಐದು ಲಕ್ಷ ರೊಟ್ಟಿ ಬರುವ ನಿರೀಕ್ಷೆಯಿದೆ. ಜಾತ್ರೆ ಆರಂಭವಾಗುವ 15 ದಿನಗಳ ಮೊದಲಿನಿಂದಲೂ ಈ ಕೆಲಸ ನಡೆಯುತ್ತದೆ. ಎಲ್ಲ ಧರ್ಮಗಳ ಹಾಗೂ ಜಾತಿಗಳ ಜನ ರೊಟ್ಟಿ ತಟ್ಟಿ ತಮ್ಮ ಕೈಲಾದಷ್ಟು ಸೇವೆ ಸಲ್ಲಿಸುತ್ತಾರೆ. ಇನ್ನೂ ಕೆಲವರು ತಮ್ಮ ಮನೆಗಳಲ್ಲಿ ಸಾಧ್ಯವಾದಷ್ಟು ರೊಟ್ಟಿಗಳನ್ನು ತಯಾರಿಸಿ ಗ್ರಾಮದ ದೇವಸ್ಥಾನದಲ್ಲಿ ಸಂಗ್ರಹಿಸಿ ಅದ್ದೂರಿ ಮೆರವಣಿಗೆ ಮೂಲಕ ಬಂದು ಗವಿಮಠಕ್ಕೆ ಅರ್ಪಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.