
ಅಳವಂಡಿ: ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆ ಮುಗಿದರೂ ಭಕ್ತರ ಭೇಟಿ ಇನ್ನೂ ಕಡಿಮೆಯಾಗಿಲ್ಲ. ಹೀಗಾಗಿ ದಾಸೋಹಕ್ಕೆ ವಿವಿಧ ಗ್ರಾಮಗಳ ರೈತರು ನಾನಾ ರೀತಿಯ ಖಾದ್ಯಗಳನ್ನು ದೇಣಿಗೆ ಸಲ್ಲಿಸುತ್ತಿದ್ದಾರೆ.
ಕೊಪ್ಪಳ ತಾಲ್ಲೂಕಿನ ಘಟ್ಟಿರಡ್ಡಿಹಾಳ ಗ್ರಾಮಸ್ಥರು ಸುಮಾರು ಎರಡೂವರೆ ಕ್ವಿಂಟಾಲ್ ಜಿಲೇಬಿ, 10 ಸಾವಿರ ರೊಟ್ಟಿ ಹಾಗೂ 10 ಟ್ರ್ಯಾಕ್ಟರ್ ಕಟ್ಟಿಗೆಯನ್ನು ಶುಕ್ರವಾರ ಗವಿಮಠಕ್ಕೆ ಸಮರ್ಪಿಸಿದ್ದಾರೆ.
‘ಪ್ರತಿವರ್ಷ ನಮ್ಮ ಗ್ರಾಮದಿಂದ ಗವಿಸಿದ್ದೇಶ್ವರ ಜಾತ್ರೆಗೆ ರೊಟ್ಟಿ, ನಾನಾ ಖಾದ್ಯ, ದವಸ ಧಾನ್ಯ, ಕಟ್ಟಿಗೆ ಕಳುಹಿಸುವುದು ಸಂಪ್ರದಾಯ. ಹಾಗಾಗಿ ಈ ವರ್ಷ ಜಾತ್ರೆಗೆ ಆಗಮಿಸುವ ಭಕ್ತರಿಗೆ ಜಿಲೇಬಿ, ರೊಟ್ಟಿ ಜತೆ ಅಡುಗೆ ತಯಾರಿಸಲು ಕಟ್ಟಿಗೆಯನ್ನೂ ಕಳಿಸಿದ್ದೇವೆ’ ಎಂದು ಗ್ರಾಮಸ್ಥರು ತಿಳಿಸಿರು.
ಮೈನಹಳ್ಳಿ ವರದಿ: ಅಳವಂಡಿ ಸಮೀಪದ ಮೈನಹಳ್ಳಿ ಗ್ರಾಮಸ್ಥರು ಈ ವರ್ಷವೂ ಗವಿಸಿದ್ದೇಶ್ವರ ಮಠಕ್ಕೆ ಶೇಂಗಾ ಹೋಳಿಗೆ, ರೊಟ್ಟಿ ನೀಡಿದ್ದಾರೆ.
ಮೈನಹಳ್ಳಿ ಗ್ರಾಮದ ಭಕ್ತರು ಒಗ್ಗೂಡಿ ಸುಮಾರು 4 ಕ್ವಿಂಟಾಲ್ ಶೇಂಗಾ ಹೋಳಿಗೆ, ಎಂಟು ಸಾವಿರಕ್ಕೂ ಹೆಚ್ಚು ರೊಟ್ಟಿ ಹಾಗೂ ದವಸ ಧಾನ್ಯ ಮಠಕ್ಕೆ ಹಸ್ತಾಂತರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.