ADVERTISEMENT

ಕೊಪ್ಪಳ: ನಾಳೆ ಅಜ್ಜನ ಜಾತ್ರೆಯ ಸಮಾರೋಪ

​ಪ್ರಜಾವಾಣಿ ವಾರ್ತೆ
Published 28 ಜನವರಿ 2024, 16:04 IST
Last Updated 28 ಜನವರಿ 2024, 16:04 IST
<div class="paragraphs"><p>ಕೊಪ್ಪಳ ಗವಿಮಠದ ಆವರಣದಲ್ಲಿ ಗವಿಸಿದ್ಧೇಶ್ವರ ಜಾತ್ರೆಯ ಅಂಗವಾಗಿ ಲಘು ರಥೋತ್ಸವ (ಉಚ್ಛಾಯ) ಕಾರ್ಯಕ್ರಮ ನಡೆಯಿತು</p></div>

ಕೊಪ್ಪಳ ಗವಿಮಠದ ಆವರಣದಲ್ಲಿ ಗವಿಸಿದ್ಧೇಶ್ವರ ಜಾತ್ರೆಯ ಅಂಗವಾಗಿ ಲಘು ರಥೋತ್ಸವ (ಉಚ್ಛಾಯ) ಕಾರ್ಯಕ್ರಮ ನಡೆಯಿತು

   

ಕೊಪ್ಪಳ: ಗವಿಮಠ ಜಾತ್ರೆಯ ಸಮಾರೋಪ ಸಮಾರಂಭ ಸೋಮವಾರ ನಡೆಯಲಿದ್ದು, ಕೊನೆಯ ದಿನ ವಿವಿಧ ಕಾರ್ಯಕ್ರಮಗಳು ಜರುಗಲಿವೆ.

ಬೆಳಿಗ್ಗೆ 10 ಗಂಟೆಗೆ ಮಠದ ಆವರಣದಲ್ಲಿ ಪುರುಷರ ಹಾಗೂ ಮಹಿಳೆಯರ ಆಹ್ವಾನಿತ ಕಬಡ್ಡಿ ಟೂರ್ನಿ ಜರುಗಲಿದೆ. 11ರಿಂದ ಮಧ್ಯಾಹ್ನ 1.30ರ ತನಕ ಶಾಂತವನ ಯಾತ್ರಿ ನಿವಾಸ ರಸ್ತೆಯಲ್ಲಿ ಆನ್ವೇಷಣೆ ಆತ್ಮಚಿಂತನೆ ಆಯೋಜನೆಯಾಗಿದೆ.

ADVERTISEMENT

ಸಂಜೆ 5.30ಕ್ಕೆ ಕೈಲಾಸ ಮಂಟಪದಲ್ಲಿ ನಡೆಯುವ ಸಮಾರೋಪದಲ್ಲಿ ಶಿವಗಂಗಾಕ್ಷೇತ್ರದ ಮೇಲಣಗವಿ ವೀರಸಿಂಹಾಸನ ಸಂಸ್ಥಾನಮಠದ ಶಾಂತಮುನಿ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಪರಿಸರ ಮತ್ತು ವನ್ಯಜೀವಿ ಛಾಯಾಗ್ರಾಹಕ ಕೃಪಾಕರ ಮತ್ತು ಸೇನಾನಿ ಪಾಲ್ಗೊಳ್ಳುವರು. ಕನ್ನಡ ಚಲನಚಿತ್ರ ನಟ ದೊಡ್ಡಣ್ಣ ಸಮಾರೋಪ ನುಡಿಗಳನ್ನು ಆಡಲಿದ್ದಾರೆ.

ಸಂಗೀತ ಕಾರ್ಯಕ್ರಮದಲ್ಲಿ ಉಡುಪಿಯ ಬಳಗದ ಕಲಾಸಿಂಧು ಕಲಾವತಿ ದಯಾನಂದ ಸಂಗೀತ ಕಾರ್ಯಕ್ರಮ ನೀಡುವರು. ರಾತ್ರಿ 10 ಗಂಟೆಗೆ ಬಿ. ಪ್ರಾಣೇಶ್ ಹಾಸ್ಯೋತ್ಸವ ನಡೆಸಿಕೊಡುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.