ADVERTISEMENT

ಕಂದಕೂರರ 'ನೀರನರಸುತ್ತ' ಚಿತ್ರಕ್ಕೆ ಚಿನ್ನದ ಪದಕ

​ಪ್ರಜಾವಾಣಿ ವಾರ್ತೆ
Published 25 ಜುಲೈ 2022, 14:40 IST
Last Updated 25 ಜುಲೈ 2022, 14:40 IST
ಪ್ರಕಾಶ ಕಂದಕೂರ
ಪ್ರಕಾಶ ಕಂದಕೂರ   

ಕೊಪ್ಪಳ: ಬಲ್ಗೇರಿಯಾದಲ್ಲಿ ನಡೆದ 7ನೇ ಡ್ಯಾನ್ಯೂಬ್ ಡಿಜಿಟಲ್ ಸರ್ಕ್ಯೂಟ್ ಸ್ಪರ್ಧೆಯಲ್ಲಿ ನಗರದ ಛಾಯಾಗ್ರಾಹಕ ಪ್ರಕಾಶ ಕಂದಕೂರ ಅವರ 'ನೀರನರಸುತ್ತ...' ಶೀರ್ಷಿಕೆಯ ಚಿತ್ರ ಡಿಐಪಿಎ ಚಿನ್ನದ ಪದಕ ಪಡೆದುಕೊಂಡಿದೆ.

ನೀರಿನ ಮಹತ್ವದ ವಿಷಯ ವಸ್ತು ಒಳಗೊಂಡಿರುವ ಚಿತ್ರದಲ್ಲಿ ನೀರಿಲ್ಲದೆ ಬಿರುಕು ಬಿಟ್ಟ ನೆಲದಲ್ಲಿ ಒಂದರ ಹಿಂದೊಂದರಂತೆ ನೀರನ್ನು ಹುಡುಕುತ್ತ ಹೊರಟ ಕುರಿಗಳ ಸಾಲನ್ನು ಕಾಣಬಹುದಾಗಿದೆ. 69 ದೇಶಗಳ 261 ಛಾಯಾಗ್ರಾಹಕರ 3,630 ಛಾಯಾಚಿತ್ರಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು.

ಅಂತರರಾಷ್ಟ್ರೀಯ ಛಾಯಾಗ್ರಾಹಕರಾದ ಬಲ್ಗೇರಿಯಾದ ವೆಲಿಕಾ ತೊಡರೋವಾ, ಸರ್ಬಿಯಾದ ಜೋರನ್ ಡಿಜೋರ್ಜೆವಿಕ್, ರೊಮೇನಿಯಾದ ಓವಿ ಡಿ ಪೋಪ್, ನಾರ್ತ್ ಮೆಸಿಡೋನಿಯಾದ ಡಿಜೆನ್ ಅಂಜೆಲೊವಸ್ಕಿ ತೀರ್ಪುಗಾರರಾಗಿದ್ದರು. ಸೆ.25 ರಂದು ವಿಡಿನ್ ನಗರದಲ್ಲಿ ಬಹುಮಾನ ವಿತರಣೆ ಸಮಾರಂಭ ಹಾಗೂ ಛಾಯಾಚಿತ್ರಗಳ ಪ್ರದರ್ಶನ ನಡೆಯಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.