ADVERTISEMENT

ತಾವರಗೇರಾ: ಗುರುವಂದನಾ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2022, 5:25 IST
Last Updated 12 ಡಿಸೆಂಬರ್ 2022, 5:25 IST
ತಾವರಗೇರಾ ಪಟ್ಟಣ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ 1991–1992 ನೇ ಸಾಲಿನ ಎಸ್ಸೆಸ್ಸೆಲ್ಸಿ ತರಗತಿ ವಿದ್ಯಾರ್ಥಿನಿಯರ ಬಳಗದಿಂದ ಗುರುವಂದನಾ ಕಾರ್ಯಕ್ರಮ ನಡೆಯಿತು
ತಾವರಗೇರಾ ಪಟ್ಟಣ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ 1991–1992 ನೇ ಸಾಲಿನ ಎಸ್ಸೆಸ್ಸೆಲ್ಸಿ ತರಗತಿ ವಿದ್ಯಾರ್ಥಿನಿಯರ ಬಳಗದಿಂದ ಗುರುವಂದನಾ ಕಾರ್ಯಕ್ರಮ ನಡೆಯಿತು   

ತಾವರಗೇರಾ: ‘ವಿದ್ಯಾರ್ಥಿಗಳು ಜೀವನದಲ್ಲಿ ಮುಂದೆ ಬರಲು ಗುರುಗಳು ಮತ್ತು ಹಿರಿಯರಿಗೆ ಗೌರವ ಕೊಡಬೇಕು, ಮಹಿಳೆಯರೇ ಒಟ್ಟಾಗಿ ಗುರುವೃಂದವನ್ನು ಸೇರಿಸುವ 1991 ಮತ್ತು 1992 ನೇ ಸಾಲಿನ ಹತ್ತನೇ ತರಗತಿಯ ವಿದ್ಯಾರ್ಥಿನಿಯರ ಇಂತಹ ಕಾರ್ಯ ಶ್ಲಾಘನೀಯ’ ಎಂದು ನಿವೃತ್ತ ಶಿಕ್ಷಕ ಶೇಷಗಿರಿರಾವ್ ಹೇಳಿದರು

ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಭಾನುವಾರ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ 1991–1992 ನೇ ಸಾಲಿನ ವಿದ್ಯಾರ್ಥಿನಿಯರು ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದ ಅವರು ಮಾತನಾಡಿದರು.

ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕಿ ಜ್ಯೋತಿ ಹಳ್ಳೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪಂಚಾಕ್ಷರಯ್ಯ, ಬಸನಗೌಡ, ಅಮರೇಶಪ್ಪ ಇದ್ದರು.

ADVERTISEMENT

ಲಕ್ಷ್ಮೀ ಗೋಟೂರು, ವಿಜಯಲಕ್ಷ್ಮೀ , ಪಾರ್ವತಿ, ಪಂಕಜಾ ಇವರು ಅನಿಸಿಕೆ ಹಂಚಿಕೊಂಡರು.

ವೇದಿಕೆಯಲ್ಲಿ ಎಲ್ಲಾ ಗುರುಗಳಿಗೆ ಗೌರವ ಸನ್ಮಾನ ಮಾಡಲಾಯಿತು. ಬಳಿಕ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಗೌರವಿಸಲಾಯಿತು.

ಹಳೆ ವಿದ್ಯಾರ್ಥಿಗಳಾದ ಶಶಿಸುಧಾ ಪಾಟೀಲ, ಸರಸ್ವತಿ ಮತ್ತು 1991 ಮತ್ತು 1992 ನೇ ಸಾಲಿನ ವಿದ್ಯಾರ್ಥಿನಿಯರು ಇದ್ದರು. ಡಾ.ಸುನಂದಾ ಕುದುರೇ ಸ್ವಾಗತಿಸಿದರು. ದ್ರಾಕ್ಷಾಯಣಿ ಕಲ್ಮಠ ನಿರೂಪಿಸಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.