ಕನಕಗಿರಿ: ‘ಹಜ್ ಯಾತ್ರೆ ಪವಿತ್ರವಾಗಿದ್ದು ಮುಸ್ಲಿಂ ಸಮುದಾಯದವರು ಜೀವನದಲ್ಲಿ ಒಮ್ಮೆಯಾದರೂ ಹಜ್ ಯಾತ್ರೆ ಕೈಗೊಳ್ಳುವುದು ಕಡ್ಡಾಯ’ ಎಂದು ಮೌಲಾನ್ ಅಹ್ಮದಸಾಬ ಚಿಕ್ಕಖೇಡ ತಿಳಿಸಿದರು.
ಇಲ್ಲಿನ ನೂರಾನಿ ಮಸೀದಿ ಹತ್ತಿರ ಹಜ್ ಯಾತ್ರಿಕರಿಗೆ ಮಸೀದಿ ವತಿಯಿಂದ ಶನಿವಾರ ರಾತ್ರಿ ಆಯೋಜಿಸಿದ್ದ ಬೀಳ್ಕೊಡುಗೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮುಸ್ಲಿಂರಾದವರು ನಿತ್ಯ ಐದು ಸಲ ನಮಾಜ್ ಮಾಡುವುದು, ರಂಜಾನ್ ತಿಂಗಳಲ್ಲಿ ಉಪವಾಸ ಕೈಗೊಳ್ಳುವುದು ಹಾಗೂ ಬಡವರಿಗೆ ದಾನ ಮಾಡುವುದು ಕಡ್ಡಾಯವಾಗಿದೆ. ಮರಣದ ಕೊನೆಯ ದಿನಗಳಲ್ಲಿಯಾದರೂ ಹಜ್ ಯಾತ್ರೆ ಮಾಡಬೇಕು ಎಂದು ತಿಳಿಸಿದರು.
ಹಜ್ ಯಾತ್ರೆ ಕೈಗೊಂಡ ಖಾಜಾಸಾಬ ಮಂಗಳೂರು, ವಜೀರಸಾಬ ಕಿನ್ನಾಳ, ದಾವೂದ ಹೊಸ್ಕೇರಾ, ಮೇರಾಜ್ ಮಂಗಳೂರು, ಶಂಶಾದಬೇಗ್ಂ ಕಿನ್ನಾಳ, ಖಾಜಾಬನಿ ಮಂಗಳೂರು ಅವರನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಪಾಷ ಮುಲ್ಲಾರ, ಪ್ರಮುಖರಾದ ಹಾಜಿ ದಾದಪೀರ, ರಾಜಾಸಾಬ ವಟಪರ್ವಿ, ಮಹ್ಮದ ಷರೀಫ್ ವಟಪರ್ವಿ, ಮಹ್ಮದರಫಿ ಮಂಗಳೂರು, ಅಹ್ಮದಸಾಬ, ರಾಜಾಹುಸೇನ ಬಡಿಗೇರ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.