ADVERTISEMENT

ಗಂಗಾವತಿ: ಮಹಾರಾಷ್ಟ್ರ ಮಾದರಿ ಜಾರಿಗೆ ಹಮಾಲಿ ಕಾರ್ಮಿಕರ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 6:45 IST
Last Updated 11 ಡಿಸೆಂಬರ್ 2025, 6:45 IST
<div class="paragraphs"><p>ಗಂಗಾವತಿಯಲ್ಲಿ ಬುಧವಾರ ಹಮಾಲಿ ಕಾರ್ಮಿಕರ ಫೆಡರೇಷನ್‌ ವತಿಯಿಂದ ಪ್ರತಿಭಟನೆ ನಡೆಯಿತು</p></div>

ಗಂಗಾವತಿಯಲ್ಲಿ ಬುಧವಾರ ಹಮಾಲಿ ಕಾರ್ಮಿಕರ ಫೆಡರೇಷನ್‌ ವತಿಯಿಂದ ಪ್ರತಿಭಟನೆ ನಡೆಯಿತು

   

ಗಂಗಾವತಿ: ಹಮಾಲಿ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಬುಧವಾರ ನಗರದಲ್ಲಿ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್‌ ವತಿಯಿಂದ ಪ್ರತಿಭಟನೆ ನಡೆಯಿತು.

ರಾಜ್ಯದ ಲೋಡಿಂಗ್ ಅನ್‍ಲೋಡಿಂಗ್ ಕಾರ್ಮಿಕರಿಗೆ ಮಹಾರಾಷ್ಟ್ರ, ಕೇರಳ ಮಾದರಿಯಲ್ಲಿ ಉದ್ಯೋಗ ಭದ್ರತೆ ಹಾಗೂ ಸಾಮಾಜಿಕ ಭದ್ರತೆ ಒದಗಿಸಲು ಪ್ರತ್ಯೇಕ ಕಲ್ಯಾಣ ಮಂಡಳಿ ರಚಿಸಬೇಕು, ಗುರುತಿಸಲಾದ ಅಸಂಘಟಿತ ಕಾರ್ಮಿಕರಿಗೆ ಜಾರಿಮಾಡುತ್ತಿರುವ ಸೌಲಭ್ಯಗಳೊಂದಿಗೆ ಸಹಜ ಮರಣಕ್ಕೂ ₹1 ಲಕ್ಷ  ಪರಿಹಾರ ನೀಡಬೇಕು, ಶವ ಸಂಸ್ಕಾರ ಪರಿಹಾರದ ಮೊತ್ತವನ್ನು ₹25 ಸಾವಿರಕ್ಕೆ ಹೆಚ್ಚಿಸಬೇಕು, ಹಮಾಲಿ ಕಾರ್ಮಿಕರು ಸೇರಿದಂತೆ ಅಸಂಘಟಿತ ಕಾರ್ಮಿಕರಿಗೆ ಕರ್ನಾಟಕ ಅಸಂಘಟಿತ ಕಾರ್ಮಿಕರ ಭವಿಷ್ಯನಿಧಿ ಯೋಜನೆ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಎಪಿಎಂಸಿ ಹಮಾಲಿ ಕಾರ್ಮಿಕರಿಗಾಗಿ ಈ ಹಿಂದೆ ಪ್ರಾರಂಭಿಸಲಾದ ಕಾಯಕ ನಿಧಿ ಯೋಜನೆ ಬಡ ಹಮಾಲಿ ಕಾರ್ಮಿಕರಿಗೆ ಅತ್ಯಂತ ಪ್ರಯೋಜನಕಾರಿಯಾಗಿದ್ದು ಸರ್ಕಾರದಿಂದ ಹಾಗೂ ಹಿಂದಿನಂತೆ ಎಪಿಎಂಸಿ ಸಮಿತಿಗಳಿಂದ ನಿರಂತರ ಹಣಕಾಸು ಸಹಾಯ ಪಡೆದು ವೈದ್ಯಕೀಯ ಮರುಪಾವತಿ ಯೋಜನೆ ಮುಂದುವರೆಸಬೇಕು, ಎಲ್ಲಾ ವಸತಿ ರಹಿತ ಹಮಾಲಿ ಕಾರ್ಮಿಕರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ವಿವಿಧ ವಸತಿ ಯೋಜನೆಗಳಿಂದ ಮಾದರಿ ವಸತಿ ಯೋಜನೆ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.  

ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಕೃಷ್ಣ ನಾಯಕ, ಉಪಾಧ್ಯಕ್ಷ ಮಂಜುನಾಥ ನಾಯಕ, ಖಜಾಂಚಿ ಶ್ರೀಶೈಲಪ್ಪ, ಪ್ರಮುಖರಾದ ಬಸಪ್ಪ ಬಂಡಿರಾಜ, ಗವಿಸಿದ್ದಪ್ಪ, ಹನುಮಂತಪ್ಪ ಹಾದಿಮನಿ, ಮಹೇಶ್ವರ ಅಂಗಡಿ, ವೆಂಕಟೇಶ್, ಚಂದುಸಾಬ್, ಬೆಂಬಲಿತ ಸಂಘಟನೆಗಳ ರಹೀಂಸಾಬ್‌ ಧುಲಾಸಾಬ್, ಲಾರಿ ಚಾಲಕರ ಸಂಘದ ಜಾಕಿರಸಾಬ್, ಆಟೊಚಾಲಕರ ಸಂಘದ ಇಮಾಮ್, ಖಾಲಿಚೀಲ ಸಂಘದ ಇಂದ್ರಪ್ಪ ಜಬ್ಬಲಗುಡ್ಡ ಸೇರಿ ಅನೇಕರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.