ಗಂಗಾವತಿ: ತುಂಗಭದ್ರಾ ಜಲಾಶಯದಿಂದ ಬುಧವಾರ 75 ಸಾವಿರಕ್ಕೂ ಹೆಚ್ಚು ಕ್ಯುಸೆಕ್ ನೀರನ್ನು ನದಿಗೆ ಹರಿಬಿಡಲಾಗಿದೆ. ಇದರ ಪರಿಣಾಮ ತಾಲ್ಲೂಕಿನ ವಿರುಪಾಪಪುರ ಗಡ್ಡೆ, ನವ ವೃಂದಾವನ ಗಡ್ಡೆ, ಆನೆಗೊಂದಿ ಮತ್ತು ಐತಿಹಾಸಿಕ ಮಂಟಪಗಳು ಜಲಾವೃತವಾಗಿವೆ. ನದಿ ತೀರದ ಗ್ರಾಮಗಳ ಜಮೀನುಗಳು ಜಲಾವೃತಗೊಂಡಿವೆ.
ಕಂಪ್ಲಿ ಸೇತುವೆ ಮುಳುಗಡೆ: ಕಂಪ್ಲಿ ಸೇತುವೆಯು ಭಾಗಶಃ ಮುಳುಗಡೆಯಾಗಿದೆ. ಸಂಚಾರ ನಿರ್ಬಂಧಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಸೇತುವೆ ಬಳಿ ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗಿದೆ. ಬ್ಯಾರಿಕೇಡ್ ಹಾಕಲಾಗಿದೆ.
ನದಿ ತೀರದ ಗ್ರಾಮಗಳಾದ ಸಣಾಪುರ, ಹನುಮನಹಳ್ಳಿ, ಆನೆಗೊಂದಿ, ಚಿಕ್ಕಜಂತಕಲ್, ಬಸವನದುರ್ಗಾ, ಸಂಗಾಪುರ, ವಿಪ್ರ, ದೇವಘಾಟ್, ಢಣಾಪುರ, ಆಯೋಧ್ಯೆ ಹಾಗೂ ಹೆಬ್ಬಾಳ ಗ್ರಾಮಗಳಲ್ಲಿ ತಾಲ್ಲೂಕು ಆಡಳಿತದ ಅಧಿಕಾರಿಗಳು ನದಿ ಕಡೆ ತೆರಳಬೇಡಿ. ಜಾನುವಾರುಗಳನ್ನು ಬಿಡಬೇಡಿ ಎಂದು ಡಂಗೂರ ಸಾರಿ ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.